ನಾಳೆ ಮೈಸೂರಿನ ಐಶ್(AIIH) ನಲ್ಲಿ ‘GRADUATION DAY’

ಮೈಸೂರು,ಏಪ್ರಿಲ್,1,2024 (www.justkannada.in): ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ‘ಗ್ರಾಜುವೇಷನ್ ಡೇ’  ನಡೆಯಲಿದ್ದು ವಿಧ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಮತ್ತು ಪದಕಗಳನ್ನ ವಿತರಣೆ ಮಾಡಲಾಗುತ್ತದೆ.

ನಾಳೆ ಬೆಳಿಗ್ಗೆ 11 ಗಂಟೆಗೆ ಸಂಸ್ಥೆಯ ಆವರಣದಲ್ಲಿರುವ, ನಾಲೇಡ್ಜ್ ಪಾರ್ಕ್ ನ  ಸೆಮಿನಾರ್ ಹಾಲ್ ನಲ್ಲಿ ಕಾರ್ಯಕ್ರಮ ನಡೆಯಲಿದ್ದು  ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ  ಪ್ರೊ.ಎನ್.ಕೆ ಲೋಕನಾಥ್ ಅವರು  ವಿದ್ಯಾರ್ಥಿಗಳಿಗೆ  ಪದಕ ಮತ್ತು ಪದವಿ ಪ್ರಮಾಣ  ಪತ್ರಗಳನ್ನ ವಿತರಣೆ ಮಾಡಲಿದ್ದಾರೆ.

ಕಾರ್ಯಕ್ರಮಕ್ಕೆ  ಪುಣೆಯ ಭಾರತಿ ವಿದ್ಯಾಪೀಠದ  ಸ್ಕೂಲ್ ಆಫ್ ಆಡಿಯೋಲಜಿ ಅಂಡ್ ಸ್ಪೀಚ್ ಲಾಂಗ್ವೇಜ್ ಪ್ಯಾಥೋಲಜಿ  ಪ್ರಾಂಶುಪಾಲರಾದ  ಡಾ. ಸಿ.ಎಸ್ ವನಜಾ ಆಗಮಿಸಲಿದ್ದಾರೆ. ಐಶ್ (AIISH) ನಿರ್ದೇಶಕಿ ಡಾ.ಎಂ. ಪುಷ್ಪಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

Key words: mysore, AIIH, GRADUATION DAY