ಬರ್ತಡೇ ಪಾರ್ಟಿ ಮುಗಿಸಿ ತೆರಳುತ್ತಿದ್ದ ವೇಳೆ ಅಪಘಾತ: ದಫೇದಾರ್ ಪುತ್ರ ಸಾವು….

ಮೈಸೂರು,ಡಿ,13,2019(www.justkannada.in):  ಬರ್ತಡೇ ಪಾರ್ಟಿ ಮುಗಿಸಿ ಪಲ್ಸರ್ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್ ನಿಯಂತ್ರಣ ಕಳೆದುಕೊಂಡು ತಡೆಗೋಡೆಗೆ ಗುದ್ದಿದ ಪರಿಣಾಮ ದಫೇದಾರ್ ಪುತ್ರನೋರ್ವ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತ ಯುವಕನನ್ನು ದಫೇದಾರ ರಾಜಾರಾಮ್ ಅವರ ಪುತ್ರ ಜ್ಯೋತಿನಗರ ಬಿ ಬ್ಲಾಕ್ ನಿವಾಸಿ ಶ್ರೇಯಸ್(21) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಜೊತೆಯಲ್ಲಿದ್ದ ಯುವಕ ಕಾರ್ತಿಕ್(22)  ಗಂಭೀರ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ  ನೀಡಲಾಗುತ್ತಿದೆ.

ಇವರು ನಿನ್ನೆ ರಾತ್ರಿ ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್ ಎಸ್ಪಿ ಆಫೀಸ್ ಸರ್ಕಲ್ ಬಳಿ ತಡೆಗೋಡೆಗೆ ಬಡಿದಿದೆ. ಈ ವೇಳೆ ಶ್ರೇಯಸ್ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರ ಜೊತೆಗಿದ್ದ ಹಿಂಬದಿ ಸವಾರ ಕಾರ್ತಿಕ್(22) ಎಂಬವರಿಗೆ ಗಂಭೀರ ಗಾಯಗಳಾಗಿde.

ಸಿದ್ದಾರ್ಥ ನಗರ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಿದ್ದಾರ್ಥ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore- Accident -Birthday Party- boy-Death