Thursday, July 30, 2026

BDA Apartments

Home Crime ಮೈಸೂರಿನಲ್ಲಿ ದಸರೆ ನಡುವೆಯೂ ಎಸಿಬಿ ಆಕ್ಟಿವ್:  ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ...

ಮೈಸೂರಿನಲ್ಲಿ ದಸರೆ ನಡುವೆಯೂ ಎಸಿಬಿ ಆಕ್ಟಿವ್:  ರೆಡ್ ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ಅಧಿಕಾರಿ…

ಮೈಸೂರು,ಅ,4,2019(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ದಸರಾ ಸಂಭ್ರಮ ಮನೆ ಮಾಡಿದ್ದು ದಸರೆಯ ನಡುವೆಯೂ ಎಸಿಬಿ ಆಕ್ಟಿವ್ ಆಗಿ ಕೆಲಸ ನಿರ್ವಹಿಸುತ್ತಿದೆ. ಈ ಮಧ್ಯೆ ಲಂಚ ಸ್ವೀಕರಿಸುವ ವೇಳೆ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ವಸಂತಕುಮಾರ್ ಎಸಿಬಿ ಬಲೆಗೆ ಬಿದ್ದ ದಾಸೋಹ ಅಧಿಕಾರಿ. ಅಧಿಕಾರಿ ವಸಂತ ಕುಮಾರ್ ಮಧ್ಯಾಹ್ನದ ಬಿಸಿಯೂಟದ ವಿಚಾರವಾಗಿ  ಮುಖ್ಯೋಪಾಧ್ಯಾಯರ ಬಳಿ ಲಂಚ ಕೇಳಿದ್ದರು. ಈ ನಡುವೆ ಮುಖ್ಯೋಪಾದ್ಯಯರ ಬಳಿ 15 ಸಾವಿರ ಲಂಚದ ಹಣ ಸ್ವೀಕರಿಸುವಾಗ  ಅಧಿಕಾರಿ ವಸಂತ್ ಕುಮಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಎಸಿಬಿ ಡಿವೈಎಸ್‌ಪಿ ಪರಶುರಾಮಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಸಂತ್ ಕುಮಾರ್ ರನ್ನ ವಶಕ್ಕೆ ಪಡೆದಿದ್ದಾರೆ. ವಸಂತ್ ಕುಮಾರ್ ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

Key words: mysore- acb-trap- officer-bribe