ಮೈಸೂರಿನಲ್ಲಿಂದು ಕಂಡು ಬಂದ ಕೋವಿಡ್ ಪ್ರಕರಣಗಳೆಷ್ಟು ಗೊತ್ತೆ…?

ಮೈಸೂರು,ಏಪ್ರಿಲ್,12,2021(www.justkannada.in): ರಾಜ್ಯದಲ್ಲಿ ಕೊರೋನಾ 2ನೇ ಅಲೆ ಹೆಚ್ಚಾಗಿ ಹರಡುತ್ತಿದ್ದು ಈ ಮಧ್ಯೆ ಇಂದು ರಾಜ್ಯದಲ್ಲಿ  9,579 ಹೊಸ  ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.Agriculture,Pumpset,Adequate,Electricity,giving,Ask,Protest 

ಇನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು 362 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 58,573ಕ್ಕೆ  ಏರಿಕೆಯಾಗಿದೆ. ಹಾಗೆಯೇ ಇಂದು 303 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ  ಡಿಸ್ಚಾರ್ಜ್ ಆಗಿದ್ದಾರೆ.mysore-362  corona-case-detected-three death

ಮೈಸೂರಿನಲ್ಲಿ ಇದುವರೆಗೂ 55,527 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,960 ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಇಂದು ಮೈಸೂರಿನಲ್ಲಿ 3 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.  ಈ ಮೂಲಕ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,086ಕ್ಕೆ ಏರಿಕೆಯಾಗಿದೆ.

Key words: mysore-362  corona-case-detected-three death