ಇಂದು ಮೈಮುಲ್ ಅಧ್ಯಕ್ಷರ ಚುನಾವಣೆ: ಬಿಎಸ್ ವೈ ಸಂಬಂಧಿ ಮತ್ತು ಮಾಜಿ ಸಚಿವ ಜಿ.ಟಿ ದೇವೇಗೌಡರ ಆಪ್ತನ ನಡುವೆ ತೀವ್ರ ಪೈಪೋಟಿ….

ಮೈಸೂರು,ಆ,14,2019(www.justkannada.in):  ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ  ಒಕ್ಕೂಟದ(ಮೈಮುಲ್) ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ.

ಇಂದು ಡೈರಿ ಆವರಣದಲ್ಲಿ 1 ಗಂಟೆಗೆ ಚುನಾವಣೆ ನಡೆಯಲಿದ್ದು  ಅಧ್ಯಕ್ಷ ರ ಚುನಾವಣೆ ಗೆ ಮಾವನಹಳ್ಳಿ ಸಿದ್ದೇಗೌಡ ಹಾಗೂ ಅಶೋಕ್  ನಾಮಪತ್ರ ಸಲ್ಲಿಸಿದ್ದಾರೆ. ಅಶೋಕ್ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಹೋದರಿ ಪುತ್ರರಾಗಿದ್ದು  ಮಾವನಹಳ್ಳಿ ಸಿದ್ದೇಗೌಡ  ಅವರು ಮಾಜಿ ಸಚಿವ ಜಿ.ಟಿ ದೇವೇಗೌಡರ ಆಪ್ತರಾಗಿದ್ದಾರೆ. ಹೀಗಾಗಿ ಇಬ್ಬರ ನಡುವೆ ತೀವ್ರ ಪೈಪೋಟಿ ಎದುರಾಗಲಿದೆ.

ಮೈಮೂಲ್ ಅಧ್ಯಕ್ಷ ರ ಚುನಾವಣೆಯನ್ನ ಮಾಜಿ ಸಚಿವ ಜಿ ಟಿ ದೇವೇಗೌಡ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.  ಕಳೆದ ಭಾರಿ ಕೊರಂ ಕಾರಣದಿಂದ ಚುನಾವಣೆ ಮುಂದೂಡಲಾಗಿತ್ತು.

Key words: mymul-president-election-today- ashok-mavinahallisiddegowda