Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ನನ್ನ ಹೋರಾಟ ಸದ್ಯಕ್ಕೆ ನಿಲ್ಲಲ್ಲ-ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ.

ನನ್ನ ಹೋರಾಟ ಸದ್ಯಕ್ಕೆ ನಿಲ್ಲಲ್ಲ-ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ.

ಬೆಂಗಳೂರು,ಜೂನ್,3,2022(www.justkannada.in): ಅನೇಕರು ಹೆಚ್.ಡಿ ದೇವೇಗೌಡರ ಹೋರಾಟ ನಿಲ್ಲುತ್ತೆ  ಅಂತಿದ್ದಾರೆ. ಆದರೆ ನನ್ನ ಹೋರಾಟ ಸದ್ಯಕ್ಕೆ ನಿಲ್ಲಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿಳಿಸಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಹೆಚ್.ಡಿ ದೇವೇಗೌಡರು, 1962 ರಿಂದ ನನ್ನ ಹೋರಾಟ ಶುರುವಾಗಿದೆ. ನಾನು ಏಕಾಂಗಿಯಾಗೇ ಹೋರಾಟ ಮಾಡಿದ್ದೇನೆ. ಇನ್ನು ಜೆಡಿಎಸ್ ಜಲಧಾರೆ ಕಾರ್ಯಕ್ರಮ ಯಶಸ್ವಿಯಾಗಿದೆ.  ನಾವು ಬಡವರ ಪರ ಇರುವವರು. ಎಲ್ಲಾ ಸಮುದಾಯಕ್ಕೂ ನ್ಯಾಯ ಕೊಟ್ಟಿದ್ದೇವೆ.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಸಬೇಕಿದೆ. ಈ ಪಕ್ಷವೇ ನನ್ನನ್ನು ಪ್ರಧಾನಿ ಮಾಡಿದ್ದು ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.

Key words: My struggle – still-Former Prime Minister -HD Deve Gowda.