ನನ್ನದು ಹೋರಾಟದ ರಾಜಕಾರಣ: ನನ್ನ ರಾಜಕೀಯ ಜೀವನ ಬಗ್ಗೆ ಪುಸ್ತಕ ಬರೆದಿದ್ದೇನೆ- ಸಂಸದ ಶ್ರೀನಿವಾಸ್ ಪ್ರಸಾದ್.

ಮೈಸೂರು,ಜನವರಿ,26,2024(www.justkannada.in): ನನ್ನದು ಹೋರಾಟದ ರಾಜಕಾರಣ. 1970 ರಲ್ಲಿ ನಾನು ರಾಜಕೀಯ ಪ್ರಾರಂಭ ಮಾಡಿದೆ. ಈ ವರ್ಷ ಮಾರ್ಚ್ 17ಕ್ಕೆ ರಾಜಕಾರಣಕ್ಕೆ ಬಂದು 50 ವರ್ಷವಾಗುತ್ತೆ. ನನ್ನ ರಾಜಕೀಯ ಜೀವನ ಬಗ್ಗೆ ಪುಸ್ತಕ ಬರೆದಿದ್ದೇನೆ ಎಂದು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್,  ನನ್ನ ರಾಜಕೀಯ ಜೀವನ ಬಗ್ಗೆ ಪುಸ್ತಕ ಬರೆದಿದ್ದೇನೆ. ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಮಾಡಲಿದ್ದೇನೆ. ನನ್ನ 50ವರ್ಷದ ಚುನಾವಣೆ ರಾಜಕೀಯದ ನೆನಪುಗಳನ್ನ ಬರೆದಿದ್ದೇನೆ. ಅನೇಕರು ಲೇಖನಿಗಳನ್ನ ಬರೆದಿದ್ದಾರೆ. ಪಾರ್ಲಿಮೆಂಟ್ ನಲ್ಲಿ ನಾನು ಮಾತನಾಡಿರುವ ವಿಚಾರಗಳನ್ನ ಸಹ ಬರೆಯಲಾಗಿದೆ ಎಂದರು.

ಸುದೀರ್ಘವಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ರಾಜಕಾರಣ ಅಂದರೆ ಸುಮ್ಮನೆ ಅಲ್ಲ. ರಾಜಕಾರಣ ಮಾಡಿ ಸಾಕಾಗಿದೆ. ಈಗ ವಿಶ್ರಾಂತಿಯ ಅವಶ್ಯಕತೆ ಇದೆ. ಕೇಂದ್ರ ಮತ್ತು ರಾಜ್ಯದ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಎಲ್ಲಾ ಪಕ್ಷಗಳಿಗೂ ದುಡಿದಿದ್ದೇನೆ. ನನ್ನದು ಹೋರಾಟದ ರಾಜಕಾರಣ. ಚಾಮರಾಜನಗರ ಜಿಲ್ಲೆಗೂ ನನಗೂ ಅವಿನಾಭಾವ ಸಂಬಂಧವಿದೆ. ಜನ ನನಗೆ ಸಾಕಷ್ಟು ಆಶೀರ್ವಾದ ಮಾಡಿದ್ದಾರೆ. ನಾನು ಯಾರಿಗೆ ಸಪೋರ್ಟ್ ಮಾಡಿದೆ ಅವರೆಲ್ಲರೂ ಚುನಾವಣೆಯಲ್ಲಿ ಗೆದ್ದಿದ್ದಾರೆ. ದೃವ ನಾರಾಯಣ್ ನನ್ನ ನಾನೇ ಕ್ಯಾಂಡಿಡೇಟ್ ಮಾಡಿ ಗೆಲ್ಲಿಸಿದ್ದೇನೆ ಎಂದು ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ಸಂಸದರಿಗೆ ಪ್ರತಿವರ್ಷ 5ಕೋಟಿ ರೂ. ಅನುದಾನ ಬರುತ್ತೆ. ಕೋವಿಡ್ ಕಾರಣದಿಂದ ಎರಡು ವರ್ಷ ಅನುದಾನ ಬರಲಿಲ್ಲ. ನನ್ನ ಅವಧಿಯಲ್ಲಿ 17.50 ಕೋಟಿ ಅನುದಾನ ಬಿಡುಗಡೆಯಾಗಿದೆ. 137 ಕಾಮಗಾರಿಗಳಿಗೆ ಅನುದಾನ ಹಾಕಿದ್ದೆವು. ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಿದೆವು ಎಂಬುದನ್ನ ಪರಿಶೀಲನೆ ಮಾಡಿದ್ದೇನೆ. ಕಾಮಗಾರಿ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದೇನೆ ಎಂದು ಸಂಸದ ವಿ ಶ್ರೀನಿವಾಸ್ ಪ್ರಸಾದ್ ಹೇಳಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಅವರ ವೈಯಕ್ತಿಕ ನಿರ್ಧಾರ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿ.ಶ್ರೀನಿವಾಸ್ ಪ್ರಸಾದ್,  ಅದು ಅವರ ವೈಯಕ್ತಿಕ ನಿರ್ಧಾರ, ಅದಕ್ಕೆ ನಾನೇನು ಹೇಳಲಿಕ್ಕೆ ಆಗೋಲ್ಲ. ಇದು ಪಕ್ಷಾಂತರ ಅಲ್ಲ. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದವರು ಯೋಚನೆ ಮಾಡಬೇಕಿತ್ತು. ಪಕ್ಷದಲ್ಲಿ ಎಲ್ಲವನ್ನು ಅನುಭವಿಸಿ ಟಿಕೆಟ್ ಕೊಡಲಿಲ್ಲ ಎಂದು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಸ್ವಾಗತ ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದರು. ಚುನಾವಣೆಯಲ್ಲಿ ಸೋತರು ವಿಧಾನಪರಿಷತ್ ಸದಸ್ಯನ್ನಾಗಿ ಮಾಡಿದರು. ಪಕ್ಷದಲ್ಲಿ ನಿಷ್ಠೆಯಿಂದ ಇದ್ದರು. ಯಾರು ನನಗೆ ತೊಂದರೆ ಕೊಡಲಿಲ್ಲ ಎಂದು ಹೇಳಿದರು. ಬಿಜೆಪಿಯವರು ನನ್ನನ್ನ ಕರೆದ್ರು, ರಾಷ್ಟ್ರ ನಿಷ್ಠೆಯಿಂದ ವಾಪಾಸ್ ಬಂದೆ ಅಂತ ಅವರೇ ಹೇಳಿದ್ದಾರೆ ಎಂದು ಅಭಿಪ್ರಾಯ ತಿಳಿಸಿದರು.

Key words: My Politics – Struggle- written – book – MP -Srinivas Prasad-mysore