ನೂಪುರ್ ಶರ್ಮ ಬಂಧನಕ್ಕೆ ಆಗ್ರಹಿಸಿ ದೇಶದ ಹಲವೆಡೆ  ಮುಸ್ಲಿಂರಿಂದ ಪ್ರತಿಭಟನೆ, ಆಕ್ರೋಶ.

ನವದೆಹಲಿ,ಜೂನ್,10,2022(www.justkannada.in):  ಪ್ರವಾದಿ ಮುಹಮ್ಮದ್ ಅವರ ವಿರುದ್ಧ  ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ  ಬಿಜೆಪಿ ವಕ್ತಾರೆ ನೂಪುರ್ ಶರ್ಮ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ದೇಶದ ವಿವಿಧ ಭಾಗಗಳಲ್ಲಿಪ್ರತಿಭಟನೆ ನಡೆಯಿತು.

ಇಂದು ಶುಕ್ರವಾರ ಪ್ರಾರ್ಥನೆ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಮುಸ್ಲೀಂರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ದೆಹಲಿಯ ಜಾಮಿಯಾ ಮಸೀದಿ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಹಾಗೆಯೇ ಜಮ್ಮು ಕಾಶ್ಮೀರ, ಶ್ರೀನಗರ, ಕೊಲ್ಕತ್ತಾ,  ಮೊರಾದಾಬಾದ್,ಅಹ್ಮದಾಬಾದ್ , ಉತ್ತರ ಪ್ರದೇಶ, ಮುಂಬೈ ಸೇರಿ ಹಲವೆಡೆ ಪ್ರತಿಭಟನೆ ನಡೆದಿದೆ.

ಪ್ರತಿಭಟನೆ ವೇಳೆ ಕೆಲವು ಕಡೆಗಳಲ್ಲಿ ನೂಪುರ ಪ್ರತಿಕೃತಿ ದಹಿಸಿ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದು ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರು ಲಾಠಿಚಾರ್ಜ್ ನಡೆಸಿರುವ ಘಟನೆ ನಡೆದಿದೆ ಎನ್ನಲಾಗಿದೆ.

Key words: Muslims -protest –against- Nupur Sharma