ಮೋದಿಯವರ ಯೋಜನೆ ಲಾಭ ಪಡೆದವರಲ್ಲಿ ಮುಸ್ಲೀಂ ಮಹಿಳೆಯರು ಹೆಚ್ಚಿದ್ದಾರೆ- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು,ಜನವರಿ,10,2024(www.justkannada.in): ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳ ಲಾಭ ಪಡೆದವರಲ್ಲಿ ಮುಸ್ಲಿಂ ಮಹಿಳೆಯರು ಹೆಚ್ಚಿದ್ದಾರೆ. ಮುದ್ರಾ, ಆಯುಷ್ಮಾನ್, ಪ್ರಧಾನಮಂತ್ರಿ ಆವಾಸ್ ಯೋಜನೆ ಸೇರಿದಂತೆ ಹಲವು ಯೋಜನೆಯ  ಫಲಾನುಭವಿಗಳಾಗಿದ್ದು, ಅವರು ಸುಕ್ರಿಯಾ ಮೋದಿ ಭಾಯ್ ಜಾನ್ ಕಾರ್ಯಕ್ರಮ ಮಾಡುತ್ತಿದ್ದು, ಅದು ಅತ್ಯಂತ ಯಶಸ್ವಿಯಾಗಲಿದೆ. ಇದು ಬದಲಾವಣೆ ಸಂಕೇತ  ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಯೋಜನೆಗಳ ಫಲಾನುಭವಿಗಳಾಗಿರುವ  ಆ ತಾಯಂದಿರಿಗೆ ಅದರ ಅರಿವಿದೆ, ಆದರೆ, ಅದನ್ನು ಅದುಮಿಡುವ ಕೆಲಸ ಮಾಡುತ್ತಿದ್ದಾರೆ. ಅದರಿಂದ ಹೊರ ಬಂದು ಶುಕ್ರಿಯಾ ಮೋದಿ ಭಾಯ್ ಜಾನ್ ಕಾರ್ಯಕ್ರಮ ಮಾಡುದ್ದಾರೆ. ಇದು ಅತ್ಯಂತ ಯಶಸ್ವಿಯಾಗಲಿದೆ. ಇಂಡಿ ಒಕ್ಕೂಟಕ್ಕೆ ಇದು ಹಿನ್ನಡೆ ಆಗಲಿದೆ ಎಂದು ಹೇಳಿದರು.

ಟ್ಯಾಬ್ಲೋ ವಿಚಾರ ಅನಗತ್ಯ ಆರೋಪ

ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಕರ್ನಾಟಕದ  ಟ್ಯಾಬ್ಲೋ ಆಯ್ಕೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿನಾ ಕಾರಾಣ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ.  ಹಿಂದೆ ನಮ್ಮ‌ ಸರ್ಕಾರ ಇದ್ದಾಗ ಕೇಂದ್ರದ ರಕ್ಷಣಾ ಸಚಿವರಿಗೆ ಮಾತನಾಡಿ ಮತ್ತೆ ಟ್ಯಾಬ್ಲೋ ಬರುವಂತೆ ಮಾಡಿದ್ದೆವು. ಆ ಪ್ರಯತ್ನ ಸಿಎಂ ಮಾಡಬೇಕು. ಅದನ್ನು ಬಿಟ್ಟು ಕೇಂದ್ರದ ಮೇಲೆ ಆರೋಪ ಮಾಡುತ್ರಿದ್ದಾರೆ. 2018ರಲ್ಲಿ ಇವರು ಆಡಳಿತದಲ್ಲಿ ಇದ್ದಾಗ ಆಗಲೂ ಆಯ್ಕೆ ಆಗಿರಲಿಲ್ಲ. ಇವರು ಸುಮ್ಮನೆ ಜನರನ್ನು ಕೆರಳಿಸುವಂತೆ ಮಾಡುತ್ತಿದ್ದಾರೆ. ನಾವು ಕೂಡ ಕರ್ನಾಟಕದ ಟ್ಯಾಬ್ಲೋ ಬರಬೇಕು ಅಂತ ಮನವಿ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ಸಿಎಂ ಕುರ್ಚಿ ಉಳಿಸಿಕೊಳ್ಳಲು ರಾಜಕಾರಣ ಮಾಡುತ್ತಿದ್ದಾರೆ

ಇನ್ನು ಕರ್ನಾಟಕದಿಂದ ಹೂಡಿಕೆದಾರರು ಹೊರರಾಜ್ಯಗಳಿಗೆ ಹೋಗುತ್ತಿರುವ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರ ಬಂದ ಕೂಡಲೇ ಬಂಡವಾಳ ಹೂಡಿಕೆದಾರರು ಹೊರಗೆ ಹೋಗುವಂತ ವಾತಾವರಣ ಸೃಷ್ಟಿ ಮಾಡಿದ್ದಾರೆ. ನಮ್ಮ ಕಾಲದಲ್ಲಿ ಹೂಡಿಕೆ ಮಾಡಲು ಬಂದವರು ವಾಪಸ್ ಹೋಗುತ್ತಿದ್ದಾರೆ. ಬಂಡವಾಳ ಹೂಡಿಕೆ ಆಕರ್ಷಣೆ ಆಗುತ್ತಿಲ್ಲ. FDI ನಲ್ಲಿ ಶೇ. 30% ಕಡಿತ ಆಗಿದೆ. ಮುಖ್ಯಮಂತ್ರಿಗಳು ತಮ್ಮ ಸ್ಥಾನ ಉಳಿಸಿಕೊಳ್ಳುವ ರಾಜಕಾರಣದಲ್ಲಿ ಮಗ್ನರಾಗಿದ್ದಾರೆ. ರೈತರಿಗೆ ಬರ ಪರಿಹಾರ ನೀಡಿಲ್ಲ. ಅಭಿವೃದ್ಧಿಗೆ ನಯಾ ಪೈಸೆ ಹಣ ಬಿಡುಗಡೆ ಆಗಿಲ್ಲ. ಬಂಡವಾಳ ಹೂಡಿಕೆಗೆ ಯಾರೂ ಬರುತ್ತಿಲ್ಲ. ಸಿಎಂ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಅಲ್ಲದೇ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ರಚಿಸಿರುವ ಸಮಿತಿಗೆ ಕ್ಯಾಬಿನೆಟ್ ದರ್ಜೆ ನೀಡುವ  ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ಸಿಎಂ ಸಲಹೆಗಾರರನ್ನು ತೆಗೆದುಕೊಳ್ಳಬೇಕು ನಿಜ. ಅದು ಸದಸ್ಯರ ಶೇ 15% ಮೀರದಂತೆ ಕ್ಯಾಬಿನೆಟ್ ದರ್ಜೆ ಕೊಡಬೇಕು. ಅದಕ್ಕಿಂತ ಹೆಚ್ಚು ಕ್ಯಾಬಿನೆಟ್ ದರ್ಜೆ ಕೊಡುವಂತಿಲ್ಲ. ಹಿಂದೆ ಸಿಎಂ ಆಗಿದ್ದಾಗ ಆ ರೀತಿ ಮಾಡಬಾರದು ಎಂದು ಆದೇಶ ಇದೆ. ಇದು ಸಂವಿಧಾನ ವಿರುದ್ಧ ಮಾಡಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಮೋದಿ ಪರ ಅಲೆ ಇದೆ

ನಗರದ ಹೊರ ವಲಯದ ರೆಸಾರ್ಟ್ ನಲ್ಲಿ‌ ನಡೆದ ಸಭೆಯ ಕುರಿತು ಮಾತನಾಡಿದ ಅವರು, ಇಂದಿನ ಸಭೆಯಲ್ಲಿ 13 ಲೋಕಸಭಾ ಕ್ಷೇತ್ರದ ಬಗ್ಗೆ ಚರ್ಚೆಯಾಗಿದೆ. ಲೋಕಸಭಾ ಚುನಾವಣೆ ಬಗ್ಗೆ ಫಲಪ್ರದ ಚರ್ಚೆ ಮಾಡಿದ್ದೇವೆ‌. ಬಿಜೆಪಿಯನ್ನು ಗೆಲ್ಲಿಸಬೇಕು ಎಂದು  ಜನ ಮಾತನಾಡುತ್ತಿದ್ದಾರೆ. ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಪ್ರಧಾನಿ ಮೋದಿ‌ ಪರವಾದ ಅಲೆ ಇದೆ ಎಂದು ಹೇಳಿದರು.

Key words: Muslim -women – beneficiaries – Modi’s scheme – Former CM -Basavaraja Bommai