ಲಿಂಗದೀಕ್ಷೆ ಪಡೆದು ಮಠಾಧೀಶನಾಗಿದ್ದ ಮುಸ್ಲಿಂ ವ್ಯಕ್ತಿಯ ಸಲಿಂಗ ಕಾಮಪುರಾಣ ಬಯಲು

ಚಾಮರಾಜನಗರ,ಆಗಸ್ಟ್,6,2025 (www.justkannada.in):  ಲಿಂಗದೀಕ್ಷೆ ಪಡೆದು ಮಠಾಧೀಶನಾಗಿದ್ದ ಮುಸ್ಲಿಂ ವ್ಯಕ್ತಿಯ ಸಲಿಂಗ ಕಾಮಪುರಾಣ ಬಯಲಾಗಿದೆ.

ಮೊಹಮದ್ ನಿಸಾರ್  ಯುವಕನೊಬ್ಬನ ಜೊತೆ ಕಾಮಲೀಲೆಯ ವೀಡಿಯೋ ಬಹಿರಂಗವಾಗಿದೆ.  ಮಠಾಧೀಶನಾಗಿದ್ದ ಮೊಹಮದ್ ನಿಸಾರ್ ತನ್ನದೇ ಮೊಬೈಲ್ ‌ನಲ್ಲಿ ಇಟ್ಟುಕೊಂಡಿದ್ದ  ಅಶ್ಲೀಲ ಚಿತ್ರಗಳು ಬಹಿರಂಗವಾಗಿದೆ.

ಸ್ವಾಮೀಜಿಯ ಅಶ್ಲೀಲ ವೀಡಿಯೋ ಹಾಗು ಚಿತ್ರಗಳನ್ನು ನೋಡಿ ಗ್ರಾಮಸ್ಥರಿಗೆ ಶಾಕ್ಆಗಿದ್ದು  ನಿಜಲಿಂಗಸ್ವಾಮೀಜಿಯ ನಿಜಸ್ವರೂಪ ತಿಳಿದು ಗ್ರಾಮಸ್ಥರು ದಂಗಾಗಿದ್ದಾರೆ. ನಿಜಲಿಂಗಸ್ವಾಮೀಜಿ ಎಂದು  ನಾಮಕರಣಗೊಂಡು ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠಕ್ಕೆ ಮೊಹಮದ್ ನಿಸಾರ್ ಮಠಾಧೀಶನಾಗಿದ್ದನು.

ಮೂರು ದಿನಗಳ ಹಿಂದೆ ಮುಸ್ಲಿಂರು ಧರಿಸುವ ಟೋಪಿಯನ್ನು ಆನ್ ಲೈನ್ ಮೂಲಕ ನಿಜಲಿಂಗಸ್ವಾಮೀಜಿ ತರಿಸಿದ್ದನು.  ತನ್ನ ಮೂಲ ಧರ್ಮ ಮರೆಮಾಚಿದ್ದ ಬಗ್ಗೆ ನಿಜಲಿಂಗಸ್ವಾಮೀಜಿ ದಾಖಲೆಗಳಲ್ಲು ಹಿಂದಿನ ಹೆಸರನ್ನೇ ಉಳಿಸಿಕೊಂಡಿದ್ದನು.

ನಿಜಲಿಂಗಸ್ವಾಮೀಜಿಯ ನಿಜಸ್ವರೂಪ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಪೀಠತ್ಯಾಗ ಮಾಡುವುದಾಗಿ ಹೇಳಿ ಸದ್ದಿಲ್ಲದೆ ಜಾಗ ಖಾಲಿ ಮಾಡಿ ಯಾದಗಿರಿಗೆ ಮೊಹಮದ್ ನಿಸಾರ್ ಅಲಿಯಾಸ್ ನಿಜಲಿಂಗಸ್ವಾಮೀಜಿ ವಾಪಸ್ ಆಗಿದ್ದಾನೆ.

ನಿಸಾರ್ ಮೊಹಮದ್ ನಿಂದ ಅಕ್ಷರ ದಾಸೋಹ, ಶೈಕ್ಷಣಿಕ ಕ್ರಾಂತಿ ಮಾಡಿದ ವೀರಶೈವ ಲಿಂಗಾಯತ ಧರ್ಮಕ್ಕೆ ದ್ರೋಹ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

Key words: Muslim man, swamiji, chamarajnagar