ಚಾಮರಾಜನಗರ, ಆಗಸ್ಟ್,6,2025 (www.justkannada.in): ಜಂಗಮ ದೀಕ್ಷೆ ಪಡೆದು ಮಠಾಧೀಶರಾಗಿದ್ದ ಮುಸ್ಲಿಂ ಸಮುದಾಯದ ಸಾಧಕ ವಾಪಸ್ ಆಗಿದ್ದಾರೆ.
ನಿಜಲಿಂಗಸ್ವಾಮೀಜಿ ಎಂದು ನಾಮಕರಣಗೊಂಡಿದ್ದ ಮಹಮದ್ ನಿಸಾರ್ ಮೂಲತಃ ಯಾದಗಿರಿ ಜಿಲ್ಲೆ ಶಹಪುರದವರು. ಬಸವ ತತ್ವ ಚಿಂತನೆಗಳಿಂದ ಪ್ರಭಾವಿತರಾಗಿ ಜಂಗಮದೀಕ್ಷೆ ಪಡೆದಿದ್ದರು ನಿಜಲಿಂಗಸ್ವಾಮೀಜಿ ಎಂದು ಬಸವಕಲ್ಯಾಣದ ಬಸವಪ್ರಭುಸ್ವಾಮೀಜಿ ನಾಮಕರಣ ಮಾಡಿದ್ದರು. ನಿಜಲಿಂಗಸ್ವಾಮೀಜಿ ಬಸವತತ್ವ ಪ್ರಚಾರಕರಾಗಿದ್ದರು.
ಈ ಮಧ್ಯೆ ಮೂಲತಃ ಮುಸ್ಲಿಂ ಎಂದು ತಿಳಿಯುತ್ತಿದ್ದಂತೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೋಕಿನ ಚೌಡಹಳ್ಳಿ ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚೌಡಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಿರ್ಮಾಣವಾಗಿದ್ದ ಗುರುಮಲ್ಲೇಶ್ವರ ವಿರಕ್ತ ಮಠ. ಮಠ ನಿರ್ಮಿಸಿದ್ದ ಗ್ರಾಮದ ಮಹದೇವಪ್ರಸಾದ್ ವಿದೇಶದಲ್ಲಿ ನೆಲಸಿದ್ದಾರೆ. ನಿಜಲಿಂಗಸ್ವಾಮೀಜಿಯನ್ನು ಮಠಾಧೀಶರನ್ನಾಗಿ ಮಾಡಲು ಮಹದೇವಪ್ರಸಾದ್ ಕರೆತಂದಿದ್ದರು.
ಒಂದುವರೆ ತಿಂಗಳಿಂದ ಮಠದಲ್ಲಿ ಪೂಜೆ ಪುನಸ್ಕಾರ ಮಾಡಿಕೊಂಡಿದ್ದ ನಿಜಲಿಂಗಸ್ವಾಮೀಜಿಯ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಗ್ರಾಮದ ಯುವಕರಿಗೆ ದೊರೆತಿದೆ. ನಿಜಲಿಂಗಸ್ವಾಮೀಜಿ ಮೂಲತಃ ಮುಸ್ಲಿಂ ಎಂದು ತಿಳಿದು ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತವಾಗಿದ್ದು ಇಷ್ಟವಿಲ್ಲದಿದ್ದರೆ ಪೀಠತ್ಯಾಗ ಮಾಡುವುದಾಗಿ ಯಾದಗಿರಿಗೆ ನಿಜಲಿಂಗಸ್ವಾಮೀಜಿ ವಾಪಸ್ ತೆರಳಿದರು.
Key words: Muslim community, swmiji, returns, Chamarajanagar