ಕರ್ನಾಟಕದ ಎಲ್ಲಾ ದೇವಸ್ಥಾನಗಳಲ್ಲೂ ಮುಸ್ಲೀಂ ವ್ಯಾಪಾರ ಬಹಿಷ್ಕರಿಸಬೇಕು- ಪ್ರಮೋದ್ ಮುತಾಲಿಕ್ ಆಗ್ರಹ.

ಚಾಮರಾಜನಗರ,ನವೆಂಬರ್,24,2022(www.justkannada.in): ಕರ್ನಾಟಕದ ಎಲ್ಲಾ ದೇವಸ್ಥಾನಗಳಲ್ಲೂ ಮುಸ್ಲೀಂ ವ್ಯಾಪಾರ ಬಹಿಷ್ಕರಿಸಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ  ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ಚಾಮರಾಜನಗರದಲ್ಲಿ ಇಂದು ಮಾತನಾಡಿದ ಪ್ರಮೋದ್ ಮುತಾಲಿಕ್, ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಬೇರೆ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ.   ಹಿಂದೂ ದೇವಾಲಯಗಳ 100 ಮೀಟರ್ ನಲ್ಲಿ ಹಿಂದೂಯೇತರರಿಗೆ ಪ್ರವೇಶವಿಲ್ಲ, ವ್ಯಾಪಾರ ಮಾಡಬಾರದು ಎಂದು ಧಾರ್ಮಿಕ ದತ್ತಿ ಇಲಾಖೆ ಕಾನೂನು ಇದೆ. ಕರ್ನಾಟಕದ ಎಲ್ಲಾ ದೇವಸ್ಥಾನಗಳಲ್ಲೂ ಮುಸ್ಲೀಂ ವ್ಯಾಪಾರ ಬಹಿಷ್ಕರಿಸಿ ಎಂದರು.

ಯಾರೋ ನಾಲ್ಕು ಜನ ಮುಸ್ಲೀಂ  ಕಿಡಿಗೇಡಿಗಳು ಮಾಡುವುದರಿಂದ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು. ಇದನ್ನ ಮುಸ್ಲೀಂ ಮುಖಂಡರು, ಮೌಲ್ವಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಕೊಲೆ, ಗಲಾಟೆ, ಭಯೋತ್ಪಾದನೆಗೆ ಕಾಂಗ್ರೆಸ್ ಕಾರಣ. ಸಿದ್ದರಾಮಯ್ಯ 200 ಜನರ ಮೇಲಿನ ಕೇಸ್ ವಾಪಸ್ ಪಡೆದಿದ್ದರು. ಯಾವ ಆಧಾರದ ಮೇಲೆ ವಾಪಸ್ ಪಡೆದಿದ್ರು. ವಾಪಸ್ ಪಡೆದ ಕೇಸ್ ಗಳನ್ನ ರೀ ಓಪನ್ ಮಾಡಿಸಿ ಎಂದು ಪ್ರಮೋದ್ ಮುತಾಲಿಕ್  ಒತ್ತಾಯಿಸಿದರು.

Key words: Muslim -business – boycotted – all temples – Karnataka-Pramod Muthalik