ಪೋಕ್ಸೋ ಪ್ರಕರಣ: ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ.

ಚಿತ್ರದುರ್ಗ, ಸೆಪ್ಟೆಂಬರ್ 13,2022(www.justkannada.in): ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆಯನ್ನು  ಕೋರ್ಟ್ ನಾಳೆಗೆ ಮುಂದೂಡಿದೆ.

ಚಿತ್ರದುರ್ಗ ಜಿಲ್ಲಾ 2ನೇ ಹೆಚ್ಚುವರಿ ಸೆಷನ್ಸ್  ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಶಿವಮೂರ್ತಿ ಶರಣರು ಫೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸೆಪ್ಟೆಂಬರ್ 14ಕ್ಕೆ ನ್ಯಾಯಾಂಗ ಬಂಧನ ಮುಕ್ತಾಯವಾಗಲಿದೆ. ಹೀಗಾಗಿ ಮುರುಘಾ ಶ್ರೀಗಳಿಗೆ ನಾಳೆ ಜಾಮೀನು ಸಿಗಲಿದೆಯೇ ಇಲ್ಲವೇ ಕಾದು ನೋಡಬೇಕಿದೆ.

ಇನ್ನು ಪೋಕ್ಸೋ ಪ್ರಕರಣದ ನ್ಯಾಯಾಂಗ ಬಂಧನದಲ್ಲಿರುವ 2ನೇ ಆರೋಪಿ ಹಾಸ್ಟಲ್ ಮಹಿಳಾ ವಾರ್ಡನ್ ಜಾಮೀನು ಅರ್ಜಿ ವಿಚಾರಣೆಯನ್ನೂ ಸಹ ನಾಳೆಗೆ ಕೋರ್ಟ್ ಮುಂದೂಡಿದೆ.

Key words: Muruga Shri- bail- application -hearing -adjourned -tomorrow.