ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ: 20 ಕೆಜಿ RDX ಇಟ್ಟು ಹತ್ಯೆಗೈಯುವುದಾಗಿ ಇಮೇಲ್.

ನವದೆಹಲಿ,ಏಪ್ರಿಲ್,1,2022(www.justkannada.in): ಪ್ರಧಾನಿ ನರೇಂದ್ರ ಮೋದಿ  ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದ್ದು 20 ಕೆಜಿ RDX ಇಟ್ಟು ಮೋದಿ  ಅವರನ್ನ  ಹತ್ಯೆ ಮಾಡುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬ ಎನ್ ಐಎಗೆ ಇಮೇಲ್ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸ್ಫೋಟಕ ಮಾಹಿತಿಯನ್ನ ಕೇಂದ್ರದ ಗುಪ್ತಚರ ಸಂಸ್ಥೆ ಬಹಿರಂಗ ಮಾಡಿದೆ. ಅನಾಮಧೇಯ ವ್ಯಕ್ತಿಯಿಂದ ಮುಂಬೈನಲ್ಲಿರುವ ನ್ಯಾಷನಲ್​ ಇನ್ವೆಸ್ಟಿಗೇಶನ್​ ಸಂಸ್ಥೆಗೆ ಇ ಮೇಲ್​ ಬಂದಿದೆ. ‘ಮೋದಿ ನನ್ನ ಜೀವನ  ನಾಶ ಮಾಡಿದ್ದಾರೆ. ನನ್ನ ರೀತಿಯಲ್ಲೇ ಹಲವರು ಸಂಕಷ್ಟದಲ್ಲಿದ್ದಾರೆ. ಮೋದಿಯನ್ನು ಮುಗಿಸುವುದೇ ನನ್ನ ಗುರಿ. ಇದರ ಜೊತೆ ನಾನು 2 ಕೊಟಿ ಜನರನ್ನ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

20 ಸ್ಲೀಪರ್​ ಸೆಲ್​ಗಳು ಸಕ್ರಿಯವಾಗಿವೆ. ಮೋದಿ ಹತ್ಯೆಗೆ 20 ಕೆಜಿ RDX ಬಳಸಲಾಗುತ್ತೆ. ದೇಶಾದ್ಯಂತ 20 ಕಡೆ RDX ಸ್ಫೋಟಿಸಿ 2 ಕೋಟಿಗೂ ಅಧಿಕ ಜನರನ್ನು ಬಲಿ ತೆಗೆದುಕೊಳ್ಳುತ್ತೇನೆ. ನಿಮ್ಮಲ್ಲಿ ತಡೆಯುವ ತಾಕತ್ತು ಇದ್ದರೆ ತಡೆಯಿರಿ’ ಎಂದು ಸಂದೇಶ ರವಾನಿಸಿದ್ದಾನೆ ಎನ್ನಲಾಗಿದ್ದು,  ಬೆದರಿಕೆ ಕರೆ ಹಿನ್ನೆಲೆ ತನಿಖಾ ದಳ ಅಲರ್ಟ್​ ಆಗಿದ್ದು, ಇಮೇಲ್​ ಮಾಡಿದವನ ಜಾಡು ಹಿಡಿದು ಕಾರ್ಯಾಚರಣೆ ನಡೆಸುತ್ತಿದೆ.

Key words: Murder threat – PM Modi-Email – 20kg RDX