ಮೈಸೂರು,ಅಕ್ಟೋಬರ್,7,2025 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಾಡ ಹಗಲೇ ವ್ಯಕ್ತಿಯ ಮೇಲೆ ಕಾರದಪುಡಿ ಎರಚಿ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಂದು ನಡೆದಿದೆ.
ನಗರದ ವಸ್ತು ಪ್ರದರ್ಶನದ ಮುಂಭಾಗದಲ್ಲೇ ಈ ಹತ್ಯೆ ನಡೆದಿದೆ. ಕ್ಯಾತಮಾರನಹಳ್ಳಿ ವೆಂಕಟೇಶ್ ಆಲಿಯಾಸ್ ಗಿಲ್ಕಿ ವೆಂಕಟೇಶ್ ಕೊಲೆಯಾದವರು. ಗಿಲ್ಕಿ ವೆಂಕಟೇಶ್ ಈ ಹಿಂದೆ ಕೊಲೆಯಾಗಿದ್ದ ರೌಡಿ ಶೀಟರ್ ಕ್ಯಾತಮಾರನಹಳ್ಳಿ ಕಾರ್ತಿಕ್ ಜೊತೆಗಿದ್ದವರು. ಹಳೆ ವೈಷಮ್ಯ ಹಿನ್ನಲೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಗಿಲ್ಕಿ ವೆಂಕಟೇಶ್ ಸ್ವೀಫ್ಟ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದಿದ್ದ ಐದಾರು ಯುವಕರು ಏಕಾಏಕಿ ದಾಳಿ ನಡೆಸಿ ಕಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕಾರ್, ಡಿಸಿಪಿಗಳಾದ ಸುಂದರ್ ರಾಜ್ ಮತ್ತು ಬಿಂದುಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Key words: Mysore, Man, murdered,