Sunday, September 27, 2026

BDA Apartments

ಪ್ರಿಯಕರನ ಕೊಲೆ, ಪ್ರಿಯತಮೆಯ ಕುಟುಂಬಸ್ಥರ ಮೇಲೆ ಶಂಕೆ…! BDA JK_Adv BDA Adv
Home Front Page ಪ್ರಿಯಕರನ ಕೊಲೆ, ಪ್ರಿಯತಮೆಯ ಕುಟುಂಬಸ್ಥರ ಮೇಲೆ ಶಂಕೆ…!

ಪ್ರಿಯಕರನ ಕೊಲೆ, ಪ್ರಿಯತಮೆಯ ಕುಟುಂಬಸ್ಥರ ಮೇಲೆ ಶಂಕೆ…!

 ಯಾದವಗಿರಿ, ಜನವರಿ,03,2021(www.justkannada.in) : ಪ್ರೀತಿಸುವ ವಿಚಾರ ಯುವತಿ ಮನೆಯಲ್ಲಿ ಗೊತ್ತಾಗಿ ಯುವತಿಯ ಕುಟುಂಬಸ್ಥರು ಪ್ರಿಯಕರನ ಕೊಲೆ ಮಾಡಿದ್ದಾರೆಂಬ ಶಂಕೆ ವ್ಯಕ್ತವಾಗಿದ್ದು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.jk-logo-justkannada-mysore

 ವಿಡಿಯೋ ಕಾಲ್ ನಿಂದ ಪ್ರೀತಿ ವಿಷಯ ಬಯಲು..!

ಯುವಕ ಮತ್ತುಯುವತಿ ಜಿಲ್ಲೆಯ ಶಹಾಪುರ ಗ್ರಾಮದವರಾಗಿದ್ದು, ಕಳೆದ ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರು ಜೊತೆಯಾಗಿ ಶಹಾಪುರದಲ್ಲಿ ಡಿಗ್ರಿ ಓದುತ್ತಿದ್ದರು. ಸಂತೋಷ್ ಎಂಬವನು ವಿಡಿಯೋ ಕಾಲ್ ಮಾಡಿದ್ದಾಗ ಯುವತಿ ಮನೆಯವರಿಗೆ ಪ್ರೀತಿ ವಿಚಾರ ತಿಳಿದಿದೆ.

ಹೀಗಾಗಿ, ಸಂತೋಷ್ ಎಂಬಾತನಿಗೆ ಬುದ್ಧಿಮಾತು ಹೇಳಲು ಕರೆಸಿದ ಯುವತಿ ಪೋಷಕರು ಹತ್ಯೆಗೈದು, ಶವದ ಪಕ್ಕ ಕ್ರಿಮಿನಾಶಕದ ಬಾಟಲ್ ಇಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಬಿಂಬಿಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರಿ ಬಾಲಕರ ಹಾಸ್ಟೇಲ್ ಹಿಂಬದಿಯಲ್ಲಿ ಶವ ಪತ್ತೆಯಾಗಿದೆ.

key words : murder-lover-family-members-Doubt