26 ವರ್ಷದ ‍ಪ್ರೇಯಸಿಯನ್ನ ಕೊಂದ 52 ವರ್ಷದ ವ್ಯಕ್ತಿ ಅರೆಸ್ಟ್

ಬೆಂಗಳೂರು,ಸೆಪ್ಟಂಬರ್,1,2025 (justkannada.in):  ತನ್ನಿಂದ ದೂರವಾಗಲು ನಿರ್ಧರಿಸಿದ 26 ವರ್ಷದ ಪ್ರೇಯಸಿಗೆ ಪೆಟ್ರೋಲ್ ಸುರಿದು 52 ವರ್ಷದ ವ್ಯಕ್ತಿ ಕೊಲೆ ಮಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 52 ವರ್ಷದ ವಿಠ್ಠಲ ಎಂಬಾತನೇ 26 ವರ್ಷದ  ಪ್ರೇಯಸಿ ವಿಧವೆ ವನಜಾಕ್ಷಿಯನ್ನ ಕೊಲೆ ಮಾಡಿರುವುದು. ಇಬ್ಬರು ಆನೇಕಲ್ ಬಳಿಯ  ಮಳೆನಲ್ಲಸಂದ್ರ ಗ್ರಾಮದ ನಿವಾಸಿಗಳು.

ಈ ನಡುವೆ  ವಿಠ್ಠಲ್  ಮೊದಲ ಹೆಂಡತಿ ಸಾವನ್ನಪ್ಪಿದ್ದು 2ನೇ ಹೆಂಡತಿ ಬೇರೆಯವರೊಂದಿಗೆ ಪರಾರಿಯಾಗಿದ್ದಾಳೆ. ನಂತರ ಕ್ಯಾಬ್ ಚಾಲಕನಾಗಿರುವ ವಿಠ್ಠಲ್ ಗೆ ವನಜಾಕ್ಷಿ ಪರಿಚಯವಾಗಿದೆ. ನಂತರ ಕಳೆದ ನಾಲ್ಕು ವರ್ಷದಿಂದ ಇಬ್ಬರು ಸಹಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

ಈ ಮಧ್ಯೆ ವನಜಾಕ್ಷಿ ಬೇರೊಬ್ಬನ ಜೊತೆ ಸ್ನೇಹ ಬೆಳೆಸಿದ್ದು ವಿಠ್ಠಲನನ್ನು ದೂರ ಮಾಡಲು ನಿರ್ಧರಿಸಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಜಗಳ ನಡೆದಿದ್ದು ವಿಠ್ಠಲ್ ವನಜಾಕ್ಷಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ವನಜಾಕ್ಷಿ ಸಾವನ್ನಪ್ಪಿದ್ದು  ಆರೋಪಿ ವಿಠಲನನ್ನು ಪೊಲೀಸರು ಬಂಧಿಸಿದ್ದಾರೆ.

Key words: 52-year-old man, arrested , killing, 26-year-old, girlfriend