ಈ ಬಾರಿ ದಸರಾ ‘ದೀಪಾಲಂಕಾರ, ಡ್ರೋನ್ ಶೋ’ ಮತ್ತಷ್ಟು ಆಕರ್ಷಣೀಯ- ಮುನಿಗೋಪಾಲ ರಾಜು

ಮೈಸೂರು,ಸೆಪ್ಟಂಬರ್,4,2025 (www.justkannada.in): ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ದೀಪಾಲಂಕಾರ ಮತ್ತು ಡ್ರೋನ್ ಶೋ ವನ್ನ ಮತ್ತಷ್ಟು ಆಕರ್ಷಣೀಯವಾಗಿ ಮಾಡಬೇಕೆಂದು ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ಸೆಸ್ಕ್ ನ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ ರಾಜು ತಿಳಿಸಿದರು.

ಇಂದು ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಸೆಸ್ಕ್ ನ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ ರಾಜು ಅವರು, ಈ ಬಾರಿಯ ದಸರಾ ಮಹೋತ್ಸವದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಮತ್ತಷ್ಟು ಮೆರಗು ನೀಡಲು ಸೆಸ್ಕ್ ಮುಂದಾಗಿದೆ. ಅರಮನೆ ದೀಪಾಲಂಕಾರಕ್ಕೆ ಪೂರಕವಾದ ಬಣ್ಣದಲ್ಲಿ ಮೈಸೂರು ನಗರದ ದೀಪಗಳು ಜಗಮಗಿಸಲಿವೆ.

ಕಳೆದ ಬಾರಿಯಂತೆ ಈ ಬಾರಿಯೂ ಸುಮಾರು 136 ಕಿ.ಮೀ ರಸ್ತೆಗಳವರೆಗೆ ದೀಪಾಲಂಕಾರ ಮಾಡಲಾಗುತ್ತದೆ.  ಸುಮಾರು 60ರಿಂದ 70 ಪ್ರತಿಕೃತಿಗಳನ್ನ ದೀಪಾಲಂಕಾರದಲ್ಲಿ ನಿರ್ಮಿಸುತ್ತಿದ್ದೇವೆ. ಈ ಬಾರಿ ದೀಪಾಲಂಕಾರದಲ್ಲಿ ವಿಶೇಷ ಅಂದರೆ ಕೊಲ್ಕತ್ತಾ ಮಾದರಿಯ ಮೂವಿಂಗ್ ಲೈಟ್ಸ್ ಪರಿಕಲ್ಪನೆ. ಬೇರೆ ಬೇರೆ ಕಡೆಗಳಿಂದಲೂ ಆಕರ್ಷಣಿಯ ದೀಪಗಳನ್ನ ತರಿಸಲಾಗುತ್ತದೆ. ಈ ಸಾರಿಯ ದೀಪಾಲಂಕಾರ ಅತ್ಯಾಕರ್ಷಕವಾಗಿರುತ್ತದೆ ಎಂದರು.

ಹಾಗೆಯೇ ದಸರಾ ಮಹೋತ್ಸವದಲ್ಲಿ ಡ್ರೋನ್ ಶೋ ಅಬ್ಬರ ಹೆಚ್ಚಾಗಲಿದೆ. ಕಳೆದ ವರ್ಷ 1500 ಡ್ರೋನ್ ಉಪಯೋಗಿಸಿದ್ದವು. ಈ ಬಾರಿ 3 ಸಾವಿರ ಡ್ರೋನ್ ಗಳನ್ನ ಬಳಸಿ ಬನ್ನಿಮಂಟಪದಲ್ಲಿ ಡ್ರೋನ್ ಶೋ ಮಾಡುತ್ತಿದ್ದೇವೆ . ತಾಯಿ ಚಾಮುಂಡೇಶ್ವರಿ, ದಸರಾ ಅಂಬಾರಿ ವಿವಿಧ ಆಕೃತಿಗಳನ್ನ ಮೂಡಿಸಲಾಗುತ್ತದೆ. . ಈ ಕಾಮಗಾರಿಗಳಿಗೆ 9 ರಿಂದ 10 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಮುನಿಗೋಪಾಲ ರಾಜು ತಿಳಿಸಿದರು.

Key words: Mysore  Dasara, Lighting, Drone Show, Munigopala Raju