ಡಾ.ಬಿ.ಆರ್ ಅಂಬೇಡ್ಕರ್ ಫೋಟೊಗೆ ಅಪಮಾನ : ನ್ಯಾಯಾಧೀಶರ ನಡೆಗೆ ಬೇಸತ್ತು ಪುರಸಭಾ ಸದಸ್ಯ ರಾಜೀನಾಮೆ.

ಮೈಸೂರು,ಫೆಬ್ರವರಿ,19,2022(www.justkannada.in): ರಾಯಚೂರಿನಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡರಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋಗೆ ಅಪಮಾನ ಹಿನ್ನಲೆ, ನ್ಯಾಯಾಧೀಶರ ನಡೆಗೆ ಬೇಸತ್ತು ಪುರಸಭಾ ಸದಸ್ಯರೊಬ್ಬರು ರಾಜೀನಾಮೆ ನೀಡಿದ್ದಾರೆ.

ಎಚ್.ಡಿ.ಕೋಟೆ ತಾಲೂಕಿನ ಮಿಲ್ ನಾಗರಾಜು ಎಂಬುವವರು  ಮೈಸೂರಿನ ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ನನಗೆ ಈ ಘಟನೆ ಮಾನಸಿಕವಾಗಿ ನೋವುಂಟು ಮಾಡಿದೆ. ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ ನಾನು ಗೆದ್ದಿದ್ದೇನೆ. ಅವರಿಗೆ ಅವಮಾನ ಮಾಡಿದ ಮೇಲೆ ನನಗೆ ಈ ಅಧಿಕಾರ ಬೇಡ.

ಸ್ವಾಭಿಮಾನಕ್ಕೆ ಧಕ್ಕೆಯಾದರೆ ಅಲ್ಲಿ ಒಂದು ಗಳಿಗೆಯೂ ಇರಬೇಡ ಎಂದು ಅಂಬೇಡ್ಕರ್ ಹೇಳಿದ್ದಾರೆ. ಅದಕ್ಕಾಗಿ ನಾನು ಪುರಸಭಾ ಸ್ಥಾನಕ್ಕೆ ಸಂತೋಷದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಜಿಲ್ಲಾಧಿಕಾರಿಗೆ ಪುರಸಭಾ ಸದಸ್ಯ ಮಿಲ್ ನಾಗರಾಜು ರಾಜೀನಾಮೆ ಪತ್ರ ಬರೆದಿದ್ದಾರೆ.

Key words: Municipal –member-resigns-mysore