700ನೇ ಪ್ರದರ್ಶನಕ್ಕೆ ಸಜ್ಜಾದ ‘ಮುಖ್ಯಮಂತ್ರಿ’

ಬೆಂಗಳೂರು, ಡಿಸೆಂಬರ್ 27, 2019 (www.justkannada.in): ಜ.31ರಿಂದ ಜನವರಿ 5ರವರೆಗೆ ಬೆಂಗಳೂರಿನಲ್ಲಿ ಆರು ದಿನಗಳ ಅಮೃತ ರಂಗ ಹಬ್ಬದಲ್ಲಿ ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನಗೊಳ್ಳುತ್ತಿದೆ.

ಹೌದು. ನಟ ಚಂದ್ರು ಅವರಿಗೆ ‘ಮುಖ್ಯಮಂತ್ರಿ’ ಎಂಬ ಹೆಸರು ತಂದು ಕೊಟ್ಟ ‘ಮುಖ್ಯಮಂತ್ರಿ’ ನಾಟಕಕ್ಕೆ ಈಗ 700ರ ಹೊಸ್ತಿಲು. ರಂಗಭೂಮಿ, ಕಿರುತೆರೆ, ಸಿನಿಮಾ, ರಾಜಕಾರಣ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ನಟ ‘ಮುಖ್ಯಮಂತ್ರಿ’ ಚಂದ್ರು.

ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಚೇತರಿಸಿಕೊಂಡು, ಮತ್ತೆ ನಟನಾ ಕ್ಷೇತ್ರಕ್ಕೆ ಮರಳಿದ್ದಾರೆ. ಈ ವರ್ಷಾಂತ್ಯ ಮತ್ತು ಹೊಸ ವರ್ಷಾರಂಭದಲ್ಲಿ ನಡೆಯುವ ಮೂರು ಪ್ರದರ್ಶನಗಳಲ್ಲಿ ‘ಮುಖ್ಯಮಂತ್ರಿ’ಯಾಗಿ ಚಂದ್ರು ರಂಗರಸಿಕರಿಗೂ ಕಚಗುಳಿ ಇಡಲಿದ್ದಾರೆ.