ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಅವರಿಂದ ರೈತರ ಕುಂದುಕೊರತೆ ಸಭೆ

ಮೈಸೂರು,ಸೆಪ್ಟೆಂಬರ್,13,2020(www.justkannada.in) : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಭಾನುವಾರ ರೈತರ ಕೊಂದುಕೊರತೆ ಸಭೆ ನಡೆಸಿದರು.

jk-logo-justkannada-logo

ಎಚ್ ಡಿ ಕೋಟೆ ರಸ್ತೆಯ ಡಿ ಸಾಲುಂಡಿಯ ಮುರುಡ ಬಸವೇಶ್ವರ ದೇವಾಲಯದ ಅವರಣದಲ್ಲಿ ಸಭೆ ನಡಸಲಾಯಿತು.

ಪ್ರಾಧಿಕಾರವು ಮುಡಾ ವ್ಯಾಪ್ತಿ ಬರುವ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿದ್ದು, ಸಭೆಯಲ್ಲಿ ರಸ್ತೆ,ಯುಜಿಡಿ, ಹಾಗೂ ನೂತನ ಬಡಾವಣೆಗಳ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಲಾಯಿತು.

ಈ ಸಂದರ್ಭ ನೂತನ ಬಡಾವಣೆಗಳ ತಾಂತ್ರಿಕ ಸಮಸ್ಯೆ ಗಳ ಬಗ್ಗೆ ರೈತರು ಅಳಲು ತೊಂಡಿಕೊಂಡರು.

ಸಭೆಯಲ್ಲಿ ಮುಡಾ ಅಧಿಕಾರಿಗಳು, ಸಾಲುಂಡಿ,ಕೆರೆಹುಂಡಿ,ಧನಗಳ್ಳಿ ಭಾಗದ ರೈತರು ಭಾಗವಹಿಸಿದ್ದರು.

key wrods : MUDA-President-HV Rajeev-Farmers’-grievances-meeting-them