Saturday, September 12, 2026

BDA Apartments

ಬಟ್ಟೆ ಮಾತ್ರ ಪರಿಶುದ್ಧವಾಗಿದ್ದರೇ ಸಾಕಾ? ಆಡಳಿತವೂ ಶುದ್ಧವಾಗಿರಬೇಕು- ಸಿ.ಟಿ...
Home Front Page ಬಟ್ಟೆ ಮಾತ್ರ ಪರಿಶುದ್ಧವಾಗಿದ್ದರೇ ಸಾಕಾ? ಆಡಳಿತವೂ ಶುದ್ಧವಾಗಿರಬೇಕು- ಸಿ.ಟಿ ರವಿ ಟಾಂಗ್

ಬಟ್ಟೆ ಮಾತ್ರ ಪರಿಶುದ್ಧವಾಗಿದ್ದರೇ ಸಾಕಾ? ಆಡಳಿತವೂ ಶುದ್ಧವಾಗಿರಬೇಕು- ಸಿ.ಟಿ ರವಿ ಟಾಂಗ್

ಬೆಂಗಳೂರು, ಜುಲೈ 4,2024 (www.justkannada.in): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ, ಮುಖ್ಯಮಂತ್ರಿಗಳ ಬಟ್ಟೆ ಮಾತ್ರ ಪರಿಶುದ್ಧವಾಗಿದ್ದರೆ ಸಾಕಾ? ಆಡಳಿತವೂ ಶುದ‍್ಧವಾಗಿರಬೇಕು ಎಂದು ಟಾಂಗ್ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ಸಿಎಂ ತವರು ಜಿಲ್ಲೆಯಲ್ಲಿಯೇ ಸಾವಿರಾರು ಕೋಟಿ ಅಕ್ರಮ ಆಗಿದೆ. ಸಿಎಂ ಸಿದ್ದರಾಮಯ್ಯನವರು ತಮ್ಮ ಪರಿಶುದ್ಧತೆಯನ್ನು ಸಾಬೀತುಪಡಿಸಲು ರಾಜೀನಾಮೆ ಕೊಡಬೇಕು. ದಾಖಲೆ‌ ಇಟ್ಟು ಭ್ರಷ್ಟಾಚಾರ ಜನರ ಮುಂದೆ ಬಯಲಿಗೆಳೆಯುತ್ತೇವೆ ಎಂದರು.ಬಟ್ಟೆ ಮಾತ್ರ ಪರಿಶುದ್ಧವಾಗಿದ್ದರೇ ಸಾಕಾ? ಆಡಳಿತವೂ ಶುದ್ಧವಾಗಿರಬೇಕು ct ravi

ಭೂಮಿ ವಶಪಡಿಸಿಕೊಳ್ಳಬೆಕಾದರೆ 50:50 ನಿವೇಶನ ಕೊಡಬೇಕಾಗುತ್ತದೆ. ಸರ್ಕಾರಕ್ಕೆ ಮೋಸ ಮಾಡಬೇಕೆಂದೇ ವ್ಯವಸ್ಥಿತವಾಗಿ ಮಾಡಿದ್ದಾರೆ. ಮೋಸ ಮಾಡಿರುವವರು ಸಿಎಂ ಸಿದ್ದರಾಮಯ್ಯಗೆ ಹತ್ತಿರವಾಗಿರುವವರು. ಅದಕ್ಕೆ ಸಿಎಂ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

Key words: muda, scam, CT Ravi, CM, Siddaramaiah