MUDA BUDGET : ಅಕ್ರಮ ಸಕ್ರಮಕ್ಕೆ ‘ ಅಸ್ತು’ , ಹೊಸ ತೆರಿಗೆಗೆ ‘ಸುಸ್ತು’

MUDA-budget-meeting

 

ಮೈಸೂರು, ಮಾ.31, 2022 : ಈ ತನಕ ನಿಗಧಿತ ಮೂಲಗಳಿಂದಲ್ಲೇ ಆದಾಯ ಸಂಗ್ರಹಿಸುತ್ತಿದ್ದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ಈ ಬಾರಿ ಹೊಸ ಆದಾಯದ ಮೂಲಗಳನ್ನು ಹುಡುಕಿದೆ. ಇದು ಸಾರ್ವಜನಿಕರಿಗೆ ಹೊರೆಯಾಗಲಿದೆ.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ 2022-23 ನೇ ಸಾಲಿನ ಬಜೆಟ್ ಮಂಡಿಸಿದ್ದು, 129.75 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದೆ. ಪ್ರಸಕ್ತ ಸಾಲಿಗೆ 1821.42 ಕೋಟಿ ರೂ. ಆದಾಯವನ್ನು ನಾನಾ ಮೂಲಗಳಿಂದ ಸಂಗ್ರಹಿಸಲು ಉದ್ದೇಶಿಸಿದ್ದು, 1691.67 ಕೋಟಿ ರೂ. ವೆಚ್ಚ ವಾಗುವ ಅಂದಾಜು ಮಾಡಿದೆ. (JUST ಕನ್ನಡ)

ಗುರುವಾರ ಮುಡಾ ಸಭಾಂಗಣದಲ್ಲಿ ನಡೆದ ಅಯವ್ಯಯ ಸಭೆಯಲ್ಲಿ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಈ ಬಜೆಟ್ ಮಂಡನೆ ಮಾಡಿದರು. ಅದರ ಒಟ್ಟಾರೆ ವಿವರ ಹೀಗಿದೆ…

ಗ್ರಾಹಕರಿಗೆ ಕುಡಿಯುವ ನೀರಿನ ಶುಲ್ಕ, ಕಟ್ಟಡ ತ್ಯಾಜ್ಯ ಶುಲ್ಕ, ಜಾಹೀರಾತು ಶುಲ್ಕ ಹೀಗೆ ಹಲವು ವಿವಿಧ ಬಗೆಯಲ್ಲಿ ಹೊಸ ತೆರಿಗೆ ಶುಲ್ಕ ವಿಧಿಸಲು ಮುಡಾ ನಿರ್ಧರಿಸಿದೆ. ಆ ಮೂಲಕ 11 ಕೋಟಿ ರೂ. ಗಿಂತ ಅಧಿಕ ಆದಾಯ ಸಂಗ್ರಹದ ಗುರಿ ಹೊಂದಿದೆ.
ರೋಡ್ ಕಟ್ಟಿಂಗ್ ಶುಲ್ಕ, ಎನ್‌ಓಸಿ ಶುಲ್ಕ, ಸಿಆರ್ ಶುಲ್ಕ, ಕುಡಿಯುವ ನೀರಿನ ಸೇವಾ ಶುಲ್ಕ, ಜಾಹೀರಾತು ಶುಲ್ಕದ ಮೂಲಕ ಒಟ್ಟು 6.32 ಕೋಟಿ ರೂ. ಪಾಲಿಕೆ ಮಾದರಿ, ಮುಡಾ ಬಡಾವಣೆಯಲ್ಲಿ ನೀರು ಪೂರೈಕೆ ಶುಲ್ಕದ ಮೂಲಕ 1 ಕೋಟಿ ರೂ. ಬಡಾವಣೆ ನಿರ್ಮಾಣ ವೇಳೆ ವಿಧಿಸುವ ಶೇ. 2 ರಷ್ಟು ಹಸಿರು ಶುಲ್ಕದಿಂದ 2 ಕೋಟಿ ರೂ. (JUST ಕನ್ನಡ)

ಮುಡಾ ವ್ಯಾಪ್ತಿಯ ಬಡಾವಣೆಗಳಲ್ಲಿ ಕಟ್ಟಡ ನಿರ್ಮಿಸುವ ಗ್ರಾಹಕರಿಗೆ ಕಟ್ಟಡ ನಕ್ಷೆ ಅನುಮೋದನೆ ವೇಳೆಯೇ ಡೆಬ್ರಿಸ್ ಶುಲ್ಕ ಪಡೆಯಲು ನಿರ್ಧರಿಸಲಾಗಿದೆ. ಕಟ್ಟಡ ತ್ಯಾಜ್ಯ ವಿಲೇವಾರಿಗೆ ಆಗುತ್ತಿರುವ ವೆಚ್ಚದ ಹೊರೆ ತಗ್ಗಿಸಲು ಈ ಶುಲ್ಕ ವಿಧಿಸಲಾಗುತ್ತಿದೆ. 108. ಚ.ಮೀ. ರಿಂದ 135 ಚ.ಮೀ. ಅಳತೆಯ ನಿವೇಶನಕ್ಕೆ 10 ಸಾವಿರ ರೂ., 216 ಚ.ಮೀ. ರಿಂದ 360 ಚ.ಮೀ. ಅಳತೆಯ ನಿವೇಶನಕ್ಕೆ 25 ಸಾವಿರ ರೂ., 360 ಚ.ಮೀ. ಮತ್ತು ಹೆಚ್ಚಿನ ಅಳತೆಯ ನಿವೇಶನಕ್ಕೆ 40 ಸಾವಿರ ರೂ. ಅನ್ನು ಒಂದು ಬಾರಿಗೆ ಅನ್ವಯವಾಗುವಂತೆ ಪಾವತಿಸಿಕೊಳ್ಳಲು ಉದ್ದೇಶಿಸಲಾಗಿದೆ. ಇದರಿಂದ 3 ಕೋಟಿ ರು. ಆದಾಯ ಸಂಗ್ರಹದ ನಿರೀಕ್ಷಿಸಲಾಗಿದೆ.

ಅಕ್ರಮ ಸಕ್ರಮ :

ಬಿಬಿಎಂಪಿ ಮಾದರಿಯಲ್ಲಿ, ಮುಡಾ ವ್ಯಾಪ್ತಿಯಲ್ಲಿನ ಬಡಾವಣೆಗಳಲ್ಲಿ ನಿರ್ಮಾಣವಾಗಿರುವ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲು ಮುಡಾ ಮುಂದಾಗಿದೆ. ಆ ಮೂಲಕ ನೂರಾರು ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಿದೆ.

ಹೊಸ ಬಡಾವಣೆ :

ಬಜೆಟ್‌ನಲ್ಲಿ ಮೂರು ಕಡೆ ಹೊಸ ಬಡಾವಣೆ ನಿರ್ಮಾಣದ ಘೋಷಣೆ ಮಾಡಲಾಗಿದೆ. ಜತೆಗೆ ಹೊರ ವರ್ತುಲ ರಸ್ತೆಯ ಟೌನ್ ಪ್ಲಾನಿಂಗ್ ಯೋಜನೆ ರೂಪಿಸಿದೆ. ಭವಿಷ್ಯದ ದೃಷ್ಟಿಯಿಂದ ಹೊರ ವರ್ತುಲ ರಸ್ತೆ ನಿರ್ಮಾಣದ ಜತೆಗೆ ಈ ರಸ್ತೆ ಸಂಧಿಸುವ 7 ಹೆದ್ದಾರಿಗಳಲ್ಲಿ ವಾಣಿಜ್ಯ ಕ್ಲಸ್ಟರ್‌ಗಳನ್ನು ನಿರ್ಮಿಸಲಿದೆ. ಇದರೊಂದಿಗೆ ಮೈಸೂರು ಮೆಟ್ರೋ ಯೋಜನೆಯನ್ನು ಸಹ ಪ್ರಸ್ತಾಪಿಸಲಾಗಿದ್ದು, ಕಾರ್ಯ ಸಾಧ್ಯತಾ ವರದಿ ಸಿದ್ದಕ್ಕೆ 1 ಕೋಟಿ ರೂ. ಮೀಸಲಿಡಲಾಗಿದೆ. (JUST ಕನ್ನಡ)

ಬಜೆಟ್ ಸಭೆಯಲ್ಲಿ ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಹರ್ಷವರ್ದನ್, ವಿಧಾನ ಪರಿಷತ್ ಸದಸ್ಯರಾದ ಮರಿತೀಬ್ಬೇಗೌಡ,ಕೆ.ಟಿ.ಶ್ರೀಕಂಠೇಗೌಡ, ಡಾ.ಡಿ.ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮುಡಾ ಸದಸ್ಯರಾದ ಎಸ್‌ಬಿಎಂ ಮಂಜು, ಕೆ.ಮಾದೇಶ್, ಲಕ್ಷ್ಮೀದೇವಿ, ನವೀನ್ ಇದ್ದರು.

key words : MUDA-budget-meeting