ಸಿಎಸ್ ಕೆ ತಂಡದ ನಾಯಕ ಸ್ಥಾನಕ್ಕೆ ಎಂಎಸ್ ಧೋನಿ ರಾಜೀನಾಮೆ: ಹೊಸ ಕ್ಯಾಪ್ಟನ್ ಯಾರು ಗೊತ್ತೆ..?

ಚೆನ್ನೈ,ಮಾರ್ಚ್,24,2022(www.justkannada.in): ಇನ್ನೇರಡು ದಿನಗಳಲ್ಲಿ ಐಪಿಎಲ್ 15ನೇ ಆವೃತ್ತಿ ಆರಂಭವಾಗಲಿದ್ದು ಈ ಮಧ್ಯೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಹೌದು ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಸ್ಥಾನಕ್ಕೆ ಎಂಎಸ್ ಧೋನಿ ರಾಜೀನಾಮೆ ನೀಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ರಾಜೀನಾಮೆಯಿಂದ ತೆರವಾಗಿರುವ ನಾಯಕತ್ವದ ಸ್ಥಾನಕ್ಕೆ ಆಲ್ ರೌಂಡರ್ ರವೀಂದ್ರ ಜಡೇಜಾ  ಅವರನ್ನ ಆಯ್ಕೆ ಮಾಡಲಾಗಿದೆ. ಹೀಗಾಗಿ ಈ ಬಾರಿ ಐಪಿಎಲ್ ನಲ್ಲಿ ರವೀಂದ್ರ ಜಡೆಜಾ ಅವರು ಸಿಎಸ್ ​ಕೆ ತಂಡವನ್ನ ಮುನ್ನಡೆಸಲಿದ್ದಾರೆ.

ಈ ವಿಚಾರವನ್ನು ಸ್ವತಃ ಸಿಎಸ್​ಕೆ ಆಡಳಿತ ಮಂಡಳಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹೇಳಿಕೊಂಡಿದೆ. 2012 ರಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಅವಿಭಾಜ್ಯ ಅಂಗವಾಗಿರುವ ಜಡೇಜಾ, ಸಿಎಸ್‌ಕೆಯನ್ನು ಮುನ್ನಡೆಸುವ ಮೂರನೇ ಆಟಗಾರನಾಗಲಿದ್ದಾರೆ. ಧೋನಿ  ಆಟಗಾರರಾಗಿ ಮುಂದುವರೆಯಲಿದ್ದಾರೆ.

Key words: MS Dhoni -resigns – CSK -captain