ಮುರುಘಾ ಶ್ರೀಗಳ ಬಂಧನವಾಗಿಲ್ಲ: ತನಿಖೆಯಲ್ಲಿ ವಿಳಂಬ ಇಲ್ಲ-ಗೃಹ ಸಚಿವ ಅರಗ ಜ್ಞಾನೇಂದ್ರ.

ಬೆಂಗಳೂರು,ಆಗಸ್ಟ್,29,2022(www.justkannada.in):ಈವರೆಗೆ ಮುರುಘಾ ಶ್ರೀಗಳ ಬಂಧನವಾಗಿಲ್ಲ. ಪ್ರಕರಣ ಕುರಿತು ತನಿಖೆಯಲ್ಲಿ ಯಾವುದೇ ವಿಳಂಬವಾಗಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ  ಕುರಿತು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಕಾನೂನು ಪ್ರಕಾರ ತನಿಖೆ ನಡೆಯುತ್ತಿದ್ದು, ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಬಗ್ಗೆ ದೂರು ಪ್ರತಿ ದೂರು ದಾಖಲಾಗಿದೆ.ಈವರೆಗೆ ಮುರುಘಾ ಶ್ರೀಗಳು ಬಂಧನವಾಗಿಲ್ಲ. ಕಾನೂನು ಸಲಹೆ ಪಡೆಯಲು ತೆರಳಿದ್ದಾರೆ ಎಂದರು.

Key words: Mr. Muruga shri – No delay – investigation – Home Minister- Araga jnanendra.