Saturday, September 12, 2026

BDA Apartments

ನಾನೂ ಸೇರಿ AAP 7 ಸಂಸದರು ಬಿಜೆಪಿ ಸೇರ್ಪಡೆ: ರಾಘವ್ ಛಡ್ಡಾ ಘೋಷಣೆ BDA JK_Adv BDA Adv
Home Front Page ನಾನೂ ಸೇರಿ AAP 7 ಸಂಸದರು ಬಿಜೆಪಿ ಸೇರ್ಪಡೆ: ರಾಘವ್ ಛಡ್ಡಾ ಘೋಷಣೆ

ನಾನೂ ಸೇರಿ AAP 7 ಸಂಸದರು ಬಿಜೆಪಿ ಸೇರ್ಪಡೆ: ರಾಘವ್ ಛಡ್ಡಾ ಘೋಷಣೆ

ನವವದೆಹಲಿ,ಏಪ್ರಿಲ್,24,2026 (www.justkannada.in): ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಅವರು ಎಎಪಿ ಪಕ್ಷವನ್ನು ತೊರೆದು ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯರಾದ ರಾಘವ್ ಛಡ್ಡಾ, ಸಂದೀಪ್ ಪಾಠಕ್ ಸೇರಿದಂತೆ ಪಕ್ಷದ ಏಳು ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಪ್ರಕಟಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಘವ್ ಛಡ್ಡಾ, ರಾಜ್ಯಸಭೆಯಲ್ಲಿರುವ ಎಎಪಿಯ 2/3 ಭಾಗದಷ್ಟು ಸಂಸದರು ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ 10 ಎಎಪಿ ಸಂಸದರಿದ್ದಾರೆ. ಅವರಲ್ಲಿ 2/3 ಕ್ಕಿಂತ ಹೆಚ್ಚು ಮಂದಿ ನಮ್ಮೊಂದಿಗಿದ್ದಾರೆ. ಅವರೆಲ್ಲರೂ ಸಹಿ ಹಾಕಿದ್ದಾರೆ ಮತ್ತು ಇಂದು ಬೆಳಿಗ್ಗೆ ನಾವು ಸಹಿ ಮಾಡಿದ ಪತ್ರ ಮತ್ತು ದಾಖಲೆಗಳನ್ನು ರಾಜ್ಯಸಭಾ ಅಧ್ಯಕ್ಷರಿಗೆ ಸಲ್ಲಿಸಿದ್ದೇವೆ ಎಂದು ರಾಘವ್ ಛಡ್ಡಾ ತಿಳಿಸಿದ್ದಾರೆ.

ರಾಘವ್ ಛಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ಹರ್ಭಜನ್ ಸಿಂಗ್, ರಾಜೇಂದರ್ ಗುಪ್ತಾ, ವಿಕ್ರಮ್ ಸಾಹ್ನಿ, ಸ್ವಾತಿ ಮಾಲಿವಾಲ್ ಬಿಜೆಪಿ ಸೇರಲು ಮುಂದಾಗಿರುವ ಎಎಪಿ ರಾಜ್ಯಸಭಾ ಸದಸ್ಯರು.

Key words: 7AAP, MPs, BJP, Raghav Chadha, announces