ಮೈಸೂರು,ಜುಲೈ,19,2025 (www.justkannada.in): ಸಿಎಂ ಸಿದ್ದರಾಮಯ್ಯ ತವರು ಮೈಸೂರಿನಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ನಡೆಯುತ್ತಿದ್ದು, ಮೈಸೂರು- ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಾಲು- ಸಾಲು ಟ್ವೀಟ್ ಮಾಡಿ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶದ ಬಗ್ಗೆ ಟೀಕಿಸಿದ್ದಾರೆ.
ಒಂದಲ್ಲ, ಎರಡಲ್ಲ ಹತ್ತಕ್ಕೂ ಹೆಚ್ಚು ಟ್ವೀಟ್ ಮಾಡಿರುವ ಸಂಸದ ಯದುವೀರ್, ಸರ್ಕಾರದ ಸಾಧನೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ಸಾಧನೆ 1, ಸಾಧನೆ 2, ಸಾಧನೆ 3, ಎಂದು ಸಾಲು- ಸಾಲು ಟ್ವೀಟ್ ಮಾಡಿರುವ ಸಂಸದ ಯದುವೀರ್, ಇದೊಂದು ಯಾವುದೇ ಅಂಶವಿಲ್ಲದೆ ಸ್ವಯಂ ಅಭಿನಂದನಾ ಕಾರ್ಯಕ್ರಮ. ನಿಜವಾಗಿಯೂ ಇದನ್ನು ಆಚರಿಸುತ್ತಿರುವ ಉದ್ದೇಶವಾದರೂ ಏನು? ಇದು ರಾಜ್ಯದ ಆರ್ಥಿಕ ಕುಸಿತದ ಸಮಾರಂಭವೇ? ಭರವಸೆಗಳನ್ನು ಈಡೇರಿಸದಿರುವುದರ ಆಚರಣೆಯೆ? ಬೆಲೆ ಏರಿಕೆ ಹಾಗೂ ಸಾರ್ವಜನಿಕ ಸೇವೆಗಳು ಕುಸಿತದ ಸಮಾವೇಶವೇ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ನಿಜವಾದ ಸಾಧನೆಗಳು ಇಲ್ಲಿವೆ ಎಂದು ಲೇವಡಿ ಮಾಡಿರುವ ಸಂಸದ ಯದುವೀರ್, ವಿವಿಧ ಇಲಾಖೆಗಳಲ್ಲಿ ಅಭಿವೃದ್ಧಿ ಕ್ಷೀಣಿಸಿರುವುದು, ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ ಮುಂತಾದ ಸರ್ಕಾರದ ವೈಪಲ್ಯಗಳನ್ನ ಪ್ರಸ್ತಾಪಿಸಿ ಅಭಿವೃದ್ಧಿ ಕ್ಷೀಣಿಸಿರುವ ಕುರಿತು ಟ್ವೀಟ್ ಮಾಡಿ ಸರ್ಕಾರಕ್ಕೆ ಕುಟುಕಿದ್ದಾರೆ.
ಹಾಗೆಯೇ ಕರ್ನಾಟಕದಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ, ಕಾಂಗ್ರೆಸ್ ಸರ್ಕಾರ “ತಾತ್ಕಾಲಿಕ ನೇಮಕಾತಿ”ಯ ಬಗ್ಗೆ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತಾ ಬಂದಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಭವಿಷ್ಯದ ಭರವಸೆಯನ್ನು ತುಳಿದುಹಾಕುತ್ತಿದೆ
59,772 ಮಂಜೂರಾದ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕಾಂಗ್ರೆಸ್ ಸರ್ಕಾರ “ತಾತ್ಕಾಲಿಕ ನೇಮಕಾತಿ”ಯ ಬಗ್ಗೆ ಮಾತನಾಡುತ್ತದೆ ಎಂದು ಖಾಯಂ ಶಿಕ್ಷಕರ ನೇಮಕಕ್ಕೆ ಮುಂದಾಗದ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಇನ್ನು ಕರ್ನಾಟಕದ ಸರ್ಕಾರಿ ಶಾಲೆಗಳ ಗೋಡೆಗಳು ಬಿರುಕು ಬಿಟ್ಟಿವೆ, ಶೌಚಾಲಯಗಳು ಹದಗೆಟ್ಟಿದ್ದು, ಶಾಲಾ ಕಟ್ಟಡಗಳ ಛಾವಣಿಗಳು ಸೋರುತ್ತಿವೆ. ಸರ್ಕಾರಿ ಶಾಲಾ ಶಿಕ್ಷಣವನ್ನು ಅವಲಂಬಿಸಿರುವ ಅತ್ಯಂತ ಬಡ ಮಕ್ಕಳಿಗೆ ಯಾವುದೇ “ಗ್ಯಾರಂಟಿ” ಇಲ್ಲದಂತಾಗಿದೆ. ಒಂದು ರಾಜ್ಯವು ತನ್ನ ಶಾಲೆಗಳನ್ನು ನಿರ್ಲಕ್ಷಿಸಿದರೆ, ಅದು ತನ್ನದೇ ಆದ ಭವಿಷ್ಯವನ್ನು ಹಾಳುಮಾಡುತ್ತದೆ ಎಂದು ಸರ್ಕಾರದ ವಿರುದ್ದ ಸಂಸದ ಯದುವೀರ್ ಕಿಡಿಕಾರಿದ್ದಾರೆ.
Key words: Mysore, Congress Sadhana Convention, MP Yaduveer, tweets