ಮೈಸೂರು,ನವೆಂಬರ್,1,2025 (www.justkannada.in): ನಿನ್ನೆ ಹುಲಿ ದಾಳಿಗೆ ಬಲಿಯಾದ ಕೂಡಗಿ ಗ್ರಾಮದ ರೈತ ದೊಡ್ಡಲಿಂಗಯ್ಯ ಅವರ ನಿಧನಕ್ಕೆ ಚಾಮರಾಜನಗರ ಲೋಕಸಭಾ ಸಂಸದ ಸುನಿಲ್ ಬೋಸ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುನಿಲ್ ಬೋಸ್ ಅವರು ಇಂದು ಕೂಡಗಿ ಗ್ರಾಮಕ್ಕೆ ಭೇಟಿ ನೀಡಿ, ದೊಡ್ಡಲಿಂಗಯ್ಯ ಅವರ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು. ಬಳಿಕ, ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ದುಃಖದ ಸಂದರ್ಭದಲ್ಲಿ ಸಾಂತ್ವಾನ ಹೇಳಿದರು.
“ದೊಡ್ಡಲಿಂಗಯ್ಯ ಅವರ ಅಕಾಲಿಕ ಮರಣದಿಂದ ಕುಟುಂಬಕ್ಕೆ ಆದ ನೋವು ಅಸಹನೀಯ. ಸರ್ಕಾರ ಮತ್ತು ಇಲಾಖೆಯ ವತಿಯಿಂದ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ನೆರವು ಒದಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು. ಈ ಕಷ್ಟದ ಸಮಯದಲ್ಲಿ ನಾವು ಅವರ ಕುಟುಂಬದ ಜೊತೆ ಇರುತ್ತೇವೆ,” ಎಂದು ಸುನೀಲ್ ಬೋಸ್ ಭರವಸೆ ನೀಡಿದರು.
ಈ ದುರಂತಕ್ಕೆ ಸಂಬಂಧಿಸಿದಂತೆ ಹುಲಿ ಸೆರೆ ಕಾರ್ಯಾಚರಣೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ, ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಭಾಗ್ಯಲಕ್ಷ್ಮಿ ಮುಖಂಡರುಗಳಾದ ಸಿದ್ದರಾಜು, ಶಿವರಾಜು, ಶುಭಾನ್, ಚೆಲುವರಾಜು, ಬೆಟ್ಟಸ್ವಾಮಿ, ಪ್ರಕಾಶ್, ದೇವದಾಸ್, ಮೂರ್ತಿ, ಚಿನ್ನಯ್ಯ, ನಾಗಣ್ಣ ಹೈರಿಗೆ ಮಂಜುನಾಥ್, ಮುಂತಾದವರು ಉಪಸ್ಥಿತರಿದ್ದರು.
Key words: MP, Sunil Bose, condolences, farmer death, tiger attack, Mysore







