ಮೈಸೂರು ಅಭಿವೃದ್ಧಿ: ಮಹಾರಾಜರನ್ನು ಬಿಟ್ರೆ NEXT ನಾನೇ…?

ಮೈಸೂರು,ಜನವರಿ,29,2022(www.justkannada.in):  ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಯತ್ತು ಸ್ವಪಕ್ಷದ ಶಾಸಕರೇ ಆದ ಎಲ್.ನಾಗೇಂದ್ರ ಹಾಗೂ ಎಸ್.ಎ ರಾಮದಾಸ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಸಂಸದ ಪ್ರತಾಪ್ ಸಿಂಹ ಇಬ್ಬರು ಶಾಸಕರಿಗೆ ತಿರುಗೇಟು ನೀಡಿದ್ದಾರೆ.

ಮೈಸೂರಿನ ಮಹಾರಾಜರನ್ನು ಹೊರತುಪಡಿಸಿದರೆ ಅತಿ ಹೆಚ್ಚು ಮತಗಳ ಅಂತರದಿಂದ ನಾನು ಗೆದ್ದಿದ್ದೇನೆ. ಮೈಸೂರು ಅಭಿವೃದ್ಧಿ ಮಾಡಿದ್ದು ನಾನು, ನಾನು, ನಾನು..! ಮೈಸೂರು ಮಹಾರಾಜರನ್ನು ಬಿಟ್ಟರೆ ನೆಕ್ಟ್ ನಾನೇ ಎಂದು ಶಾಸಕ ಎಲ್.ನಾಗೇಂದ್ರರಿಗೆ ಸಂಸದ ಪ್ರತಾಪ್ ಸಿಂಹ  ಹೇಳಿದ್ದಾರೆ.

ಎಂಎಲ್‌ ಎ ನಾಗೇಂದ್ರ ಗೋಲಿ ಬುಗುರಿ ಆಡಿದ ಜಾಗದಲ್ಲೇ ಲೀಡ್ ತೆಗೆದುಕೊಂಡಿಲ್ಲ. ಇನ್ನು ಅವರು ನನಗೆ ಲೀಡ್ ಕೊಡ್ಸಿದ್ದಾರಾ ? ಮಹಾರಾಜರ ನಂತರ ಅತಿಹೆಚ್ಚು ಲೀಡ್‌ ನಲ್ಲಿ ಗೆದ್ದಿರೋದು ನಾನು. ನನ್ನಿಂದಲೇ ಮೈಸೂರು ಅಭಿವೃದ್ಧಿ ಆಗಿರೋದು.  ಶಾಸಕ ಎಲ್.ನಾಗೇಂದ್ರ  ಅಭಿವೃದ್ಧಿ ಹರಿಕಾರ ಅನ್ನುವ ಭ್ರಮೆಯಲ್ಲಿದ್ದಾರೆ. 30 ಕೋಟಿ ರೂ. ಅನುದಾನ ತಂದಿಲ್ಲ.  300 ಕೋಟಿ ರೂ. ಕೆಲಸ ಅಂತ ಹೇಳ್ತಾರೆ.  ಎಲ್ಲಿದೆ 300 ಕೋಟಿ ? ಯಾವ ರಸ್ತೆ ಮಾಡಿದ್ದೀರಿ ಅಂತ ತೋರಿಸಿ.

ಚಾಮರಾಜ ಕ್ಷೇತ್ರದ ಕೆ.ಆರ್.ಆಸ್ಪತ್ರೆಯಲ್ಲಿ ಸೊಳ್ಳೆ, ನಾಯಿ ಕಾಟ ಇದೆ.  ನಿಮ್ಮ ಕ್ಷೇತ್ರದ ವಿಜಯನಗರದಲ್ಲಿ ವಾಟರ್ ಟ್ಯಾಂಕ್ ಹಾಕಿಸಿದ್ದು ನಾನು. ಪಾಸ್ ಪೊರ್ಟ್ ಸೇವಾ ಕೇಂದ್ರ ಮಾಡಿಸಿದ್ದು ನಾನು. ನೀವು ಗೋವಾಕ್ಕೆ ಹೋಗುವ ಫ್ಲೈಟ್ ತಂದಿದ್ದು ನಾನು. ಬೆಂಗಳೂರು- ಮೈಸೂರು ಹೆದ್ದಾರಿ ಮಾಡಿಸಿದ್ದು ನಾನು. ಕೆ.ಆರ್.ಕ್ಷೇತ್ರದ ಕಸದ ಸಮಸ್ಯೆ ನಿವಾರಿಸಿದ್ದು ನಾನು. ಶಾಸಕರು ರಿಯಲ್ ಎಸ್ಟೇಟ್ ಮಾಡಲಿ. ಆದರೆ ಕೃಷ್ಣರಾಜ, ಚಾಮರಾಜ ಕ್ಷೇತ್ರಗಳು ಅವರ ಬಡಾವಣೆಗಳಲ್ಲ ಎಂದು ಸ್ವಪಕ್ಷೀಯ ಶಾಸಕರಿಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

Key words: MP Prathap simha-mysore-maharaja-next