ಸಂಸದ ಮುದ್ದಹನುಮೇಗೌಡರು ಶಿಸ್ತಿನ ರಾಜಕಾರಣಿ: ರಾಜಕೀಯ ನಿವೃತ್ತಿ ಬೇಡ- ಮನವಿ ಮಾಡಿದ ಸಚಿವ ಡಿ.ಕೆ ಶಿವಕುಮಾರ್….

ಬೆಂಗಳೂರು,ಮೇ,2,2019(www.justkannada.in):  ತುಮಕೂರು ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದಕ್ಕೆ ಸಂಸದ ಮುದ್ದಹನುಮೇಗೌಡರು ಅಸಮಾಧಾನಗೊಂಡಿದ್ದ  ತುಮಕೂರು ಚುನಾವಣೆಯಿಂದ ದೂರು ಉಳಿದಿದ್ದರು. ಈ ನಡುವೆ ಮುದ್ದಹನುಮೇಗೌಡರು ರಾಜಕೀಯ ನಿವೃತ್ತಿ ಪಡೆಯಬಾರದು ಎಂದು ಸಚಿವ ಡಿ.ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಈ ಕುರಿತು ಇಂದಯ ಮಾತನಾಡಿದ ಸಚಿವ ಡಿ,ಕೆ ಶಿವಕುಮಾರ್, ಮುದ್ದಹನುಮೇಗೌಡರು ಶಿಸ್ತಿನ ರಾಜಕಾರಣಿ.  ಅವರಿಗೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ. ಅದನ್ನು ಮುಂದೆ ಸರಿಪಡಿಸುತ್ತೇವೆ. ಹೀಗಾಗಿ ಅವರು ರಾಜಕೀಯ ನಿವೃತ್ತಿ ಪಡೆಯಬಾರದು ರಾಜಕೀಯದಲ್ಲಿ ಅವರು ಹೋರಾಟ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು ಸಂಸದ ಮುದ್ದಹನುಮೇಗೌಡರು ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದು, ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕು.

Key words: MP Muddhahanumegowda- discipline politician-  Requested- minister -DK Shivakumar