ಕುರ್ಚಿ ಕಿತ್ತಾಟ ಗೊಂದಲದಿಂದ ರಾಜ್ಯದ ಅಭಿವೃದ್ಧಿ ಸ್ಥಗಿತ- ಸಂಸದ ಶೆಟ್ಟರ್ ಕಿಡಿ

ಬೆಳಗಾವಿ,ನವೆಂಬರ್,28,2025 (www.justkannada.in):  ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ನಾಯಕತ್ವ ಬದಲಾವಣೆ ಕುರಿತು ಮುಸುಕಿನ ಗುದ್ದಾಟ ನಡೆಯುತ್ತಿದ್ದು ಈ ಕುರಿತು ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದ ಜಗದೀಶ್ ಶೆಟ್ಟರ್, ಕುರ್ಚಿ ಕಿತ್ತಾಟ ಗೊಂದಲದಿಂದ ರಾಜ್ಯದ ಅಭಿವೃದ್ದಿ ಸ್ಥಗಿತವಾಗಿದೆ. ಒಂದ ವಾರದಿಂದ ರಾಜಕೀಯ ಸ್ಟಂಟ್ ನಡೆಯುತ್ತಿದೆ.  ಸಿಎಂ ಸಿದ್ದರಾಮಯ್ಯ ಆಡಳಿತದಲ್ಲಿ ಬಿಗಿ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Key words: Power sharing, congress, government, MP Jagadish shetter