ಬೆಳಗಾವಿ,ಆಗಸ್ಟ್,1,2025 (www.justkannada.in): ಮಹದಾಯಿ ಯೋಜನೆ ಕುರಿತು ಶೀಘದ್ರದಲ್ಲೇ ಕೇಂದ್ರ ಸರ್ಕಾರ ಒಳ್ಳೆಯ ನಿರ್ಧಾರ ಕೈಗೊಳ್ಳಲಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್, ಮಹದಾಯಿ ಯೋಜನೆ ಕುರಿತು ಗೋವಾ ಸಿಎಂ ಹೇಳಿಕೆ ಸರಿಯಲ್ಲ. ಕೇಂದ್ರದವರು ಅನುಮತಿ ಕೊಡಲ್ಲ ಎಂದು ಎಲ್ಲೂ ಹೇಳಿಲ್ಲ ಗೋವಾ ಸಿಎಂ ಹೇಳಿಕೆಯಿಂದ ಅನಗತ್ಯ ಗೊಂದಲ ಸೃಷ್ಠಿಯಾಗಿದೆ. ಶೀಘ್ರದ್ರಲ್ಲೇ ಕೇಂದ್ರ ಸರ್ಕಾರ ಒಳ್ಳೆಯ ನಿರ್ಧಾರ ಮಾಡಲಿದೆ ಎಂದರು.
ಕಾಮಗಾರಿಗೆ ನಾವು ಯಾವುದೇ ವಿರೋಧ ಮಾಡಲ್ಲ. ನಮ್ಮ ರಾಜ್ಯದ ನೀರನ್ನ ನಾವು ತಿರುವು ಮಾಡಿಕೊಳ್ಳಬಹುದು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
Ke words: Mahadayi project, Good, decision , Centre, soon, MP Jagadish Shettar