ಆ.1ರೊಳಗೆ ಒಳ ಮೀಸಲಾತಿ ಜಾರಿ ಮಾಡದಿದ್ರೆ ಹೋರಾಟ- ಗೋವಿಂದ ಕಾರಜೋಳ ಎಚ್ಚರಿಕೆ

ಬೆಂಗಳೂರು,ಜುಲೈ,22,2025 (www.justkannada.in):  ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ತೀವ್ರ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಭುಗಿಲೆದ್ದಿದ್ದು ಇದೀಗ ಬಿಜೆಪಿ ಸಂಸದ ಗೋವೀಂದ ಕಾರಜೋಳ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದ ಗೋವಿಂದ ಕಾರಜೋಳ, ಒಳಮೀಸಲಾತಿ ಜಾರಿಗೆ ಸುಪ್ರೀಂಕೋರ್ಟ್  ಅವಕಾಶ ನೀಡಿದೆ. ಆದರೆ  ಕರ್ನಾಟಕ ಸರ್ಕಾರ  ಇನ್ನೂ ಒಳ ಮೀಸಲಾತಿ ಜಾರಿ ಮಾಡಿಲ್ಲ.  ಆಗಸ್ಟ್ 1ರೊಳಗೆ ಒಳ ಮೀಸಲಾತಿ ಜಾರಿ ಮಾಡಬೇಕು.  ಅಷ್ಟರೊಳಗೆ ಒಳಮೀಸಲಾತಿ ಜಾರಿ ಮಾಡದಿದ್ದರೆ  ಆಗಸ್ಟ್ 16ರಂದು ಹೋರಾಟ ಮಾಡುತ್ತೇವೆ. ನಾವು ಅಸಹಕಾರ ಚಳುವಳಿ ಮಾಡುತ್ತೇವೆ. ಅಧಿವೇಶನದ ಮೊದಲು ಒಳ ಮೀಸಲಾತಿ ನಿರ್ಣಯ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ  ಸರ್ಕಾರ ಒಳಮೀಸಲಾತಿ ಜಾರಿ ಮಾಡಲು ವಿಳಂಬ  ಮಾಡುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ನೇಮಕಾತಿಗಳು  ಸ್ಥಗಿತಗೊಂಡಿದ್ದು, ಸರ್ಕಾರದ ವಿರುದ್ದ ಉದ್ಯೋಗಾಕಾಂಕ್ಷಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.vtu

Key words: MP, Govinda Karajola, internal reservation, implement