2028ಕ್ಕೆ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತೆ- ಸಂಸದ ಡಾ.ಕೆ.ಸುಧಾಕರ್

ಬೆಂಗಳೂರು,ನವೆಂಬರ್,17,2025 (www.justkannada.in): 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತದೆ ಎಂದು ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಭವಿಷ್ಯ ನುಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಕೆ.ಸುಧಾಕರ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿಂದಲೂ ಅಲ್ಲಾಡುತಿದೆ. ಸರ್ಕಾರ ಆರ್ಥಿಕ, ರಾಜಕೀಯ, ಆಡಳಿತಾತ್ಮಕವಾಗಿ ಅಲ್ಲಾಡುತ್ತಿದೆ ಸರ್ಕಾರದಲ್ಲಿ ಯಾವುದೂ ಸರಿಯಾಗಿಲ್ಲ ಎಂದರು.

ಚುನಾವಣೆಯಲ್ಲಿ ಕಾಂಗ್ರೆಸ್ ಸೋತಾಗ ಮಾತ್ರ ಟೀಕೆ ಮಾಡುತ್ತಾರೆ.  ಬಿಜೆಪಿಯವರು ಮೋಸದಿಂದ ಗೆದ್ದರು ಎಂದು ಟೀಕೆ ಮಾಡ್ತಾರೆ.  ಮುಂದೆ ಕಾಂಗ್ರೆಸ್ ಎಲ್ಲಾ ಕಡೆಯಲ್ಲೂ ಹೀನಾಯವಾಗಿ ಸೋಲುತ್ತೆ. 2028ಕ್ಕೆ ರಾಜ್ಯದಲ್ಲೂ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತೆ ಎಂದು ಕೆ.ಸುಧಾಕರ್ ಹೇಳಿದರು.

Key words:  Congress, lose, 2028 Election, MP Dr. K. Sudhakar