ಡಿ.ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಸಂಸದ ಡಿ.ಕೆ ಸುರೇಶ್.

ನವದೆಹಲಿ,ಮೇ,18,2023(www.justkannada.in):  ಸಿದ್ಧರಾಮಯ್ಯಗೆ  ಮುಖ್ಯಮಂತ್ರಿ ಹಾಗೂ ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿದೆ. ಈ ಹಿನ್ನಲೆಯಲ್ಲಿ ತನ್ನ ಅಣ್ಣ ಡಿ.ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಕೈತಪ್ಪಿದ್ದಕ್ಕೆ ಸಂಸದ ಡಿ.ಕೆ ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಸುರೇಶ್, ಡಿಕೆ ಶಿವಕುಮಾರ್ ಡಿಸಿಎಂ ಆಗುವುದು ನನಗೆ ಸಂಪೂರ್ಣ ಖುಷಿ ತಂದಿಲ್ಲ. ಜನರ ಹಿತದೃಷ್ಠಿಯಿಂದ ನಮ್ಮ ವಾಗ್ದಾನ ಈಡೇರಬೇಕಿದೆ. ಕರ್ನಾಟಕದ ಹಿತದೃಷ್ಠಿಯಿಂದ ಡಿ.ಕೆ ಶಿವಕುಮಾರ್ ಒಪ್ಪಿದ್ದಾರೆ. ನಾವು ನೀಡಿರುವ ಭರವಸೆಗಳನ್ನ ಮೊದಲು ಈಡೇರಿಸಬೇಕು ಅದಕ್ಕಾಗಿ ಡಿಕೆಶಿ ಒಪ್ಪಿಕೊಳ್ಳಬೇಕಾಯಿತು.  ಭವಿಷ್ಯದಲ್ಲಿ ಏನಾಗುತ್ತೆ ಎಂಬುದನ್ನ ನೋಡುತ್ತೇವೆ.  ಮುಂದೇನಾಗುತ್ತೆ ಕಾದು ನೋಡೋಣ ಎಂದಿದ್ದಾರೆ.

ಸಿದ್ಧರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಇಬ್ಬರು  ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್ ಮನೆಯಲ್ಲಿ ಉಪಹಾರಕೂಟದಲ್ಲಿ ಭಾಗಿಯಾಗಿದ್ದು ಮಧ್ಯಾಹ್ನದ  ವೇಳೆಗೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

Key words: MP- DK Suresh- expressed -regret -DK Shivakumar- lost CM post