ಜಲಾಶಯದಲ್ಲಿ ಮುಳುಗಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವು.

ಚಾಮರಾಜನಗರ ,ಏಪ್ರಿಲ್,5,2024 (www.justkannada.in):  ಬಟ್ಟೆ ತೊಳೆಯಲು ಹೋಗಿದ್ದ ವೇಳೆ  ತಾಯಿ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಗುಂಡಲ್ ಜಲಾಶಯದಲ್ಲಿ ನಡೆದಿದೆ.

ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪುದೂರು ಗ್ರಾಮದ ನಿವಾಸಿ ಮೀನಾ (33) ಪವಿತ್ರ (13) ಕೀರ್ತಿ (12) ಮೃತಪಟ್ಟವರು. ಇಂದು ಮಧ್ಯಾಹ್ನ  ಗುಂಡಲ್ ಜಲಾಶಯಕ್ಕೆ ಮೂವರು ಬಟ್ಟೆ ತೊಳೆಯಲು ಹೋಗಿದ್ದರು.

ಈ ವೇಳೆ ಮೀನಾ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು  ತಾಯಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದನ್ನು ಕಂಡ ಮಕ್ಕಳು  ರಕ್ಷಿಸಲು ಮುಂದಾಗಿದ್ದಾರೆ. ನಂತರ ನೀರಿನಿಂದ ಹೊರಗೆ ಬರಲು ಆಗದೇ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Key words: Mother, children, death