ಮಹಾರಾಷ್ಟ್ರದಲ್ಲಿ ದಿನಕ್ಕೆ ಕನಿಷ್ಠ 20 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು: ಕಠಿಣ ನಿರ್ಬಂಧ ವಿಧಿಸಿದ ಸರಕಾರ

ಬೆಂಗಳೂರು, ಜನವರಿ 09, 2021 (www.justkannada.in): ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿದ್ದು, ಫೆಬ್ರವರಿ 15 ರವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶ ನೀಡಿದೆ.

ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಹೇರಿರುವ ಸರ್ಕಾರ, ಐದಕ್ಕೂ ಹೆಚ್ಚು ಮಂದಿ ಒಂದೆಡೆ ಸೇರುವಂತಿಲ್ಲ ಎಂಬ ಆದೇಶ ಹೊರಡಿಸಲಾಗಿದೆ.

ಮದುವೆ ಮತ್ತು ಇತರೆ ಸಮಾರಂಭಗಳಿಗೆ 50 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಂತ್ಯಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಸರಕಾರ ಅನುಮತಿ ನೀಡಿದೆ.

ಜಿಮ್, ಸ್ಪಾ, ಸ್ವಿಮ್ಮಿಂಗ್ ಪೂಲ್, ಸಂಗ್ರಹಾಲಯಗಳನ್ನು ಮುಚ್ಚುವಂತೆ ಆದೇಶ ನೀಡಿದೆ. ಇನ್ನು ಶಾಪಿಂಗ್ ಮಾಲ್, ರೆಸ್ಟೋರೆಂಟ್‍ಗಳಲ್ಲಿಯೂ ಶೇ. 50 ರಷ್ಟು ಮಂದಿಯಷ್ಟೇ ಕಾರ್ಯನಿರ್ವಹಿಸಬೇಕು ಎಂಬ ಆದೇಶ ಹೊರಬಿದ್ದಿದೆ.

ಮುಂಬೈನಲ್ಲಿ ಶನಿವಾರ 20,318 ಹೊಸ ಕೋವಿಡ್ ಪ್ರಕರಣಗಳು ಮತ್ತು ಐದು ಸಾವುಗಳು ವರದಿಯಾಗಿವೆ. ಶನಿವಾರ ಸಂಜೆಯ ಹೊತ್ತಿಗೆ ಸಕ್ರಿಯ ಪ್ರಕರಣಗಳು 1,06,037. ರೋಗಲಕ್ಷಣಗಳಿಲ್ಲದ ಒಟ್ಟು ರೋಗಿಗಳ ಸಂಖ್ಯೆ 82 ಪ್ರತಿಶತ ಮತ್ತು ಹಾಸಿಗೆಯ ಅವಶ್ಯಕತೆ ಇರುವವರ ಸಂಖ್ಯೆ ಶೇ. 21.4 ರಷ್ಟಿದೆ.