ಮುಂಗಾರು ಅಧಿವೇಶನ ಹಿನ್ನೆಲೆ: ಜು.18 ರಂದು ಸರ್ವಪಕ್ಷ ಸಭೆ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಹುಬ್ಬಳ್ಳಿ,ಜುಲೈ,10,2021(www.justkannada.in): ಮುಂಗಾರು ಅಧೀವೇಶನ ಹಿನ್ನೆಲೆ ಜುಲೈ 18 ರಂದು ದೆಹಲಿಯಲ್ಲಿ ಸರ್ವ ಪಕ್ಷ ಸಭೆ ನಡೆಸಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.jk

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜುಲೈ 18 ರಂದು ದೆಹಲಿಯಲ್ಲಿ ಸರ್ವ ಪಕ್ಷ ಸಭೆ ನಡೆಯಲಿದೆ.ಮುಂಗಾರು ಅಧಿವೇಶನದಲ್ಲಿ ಸುಮಾರು 20ಕ್ಕೂ ಹೆಚ್ಚು ಮಸೂದೆ ಮಂಡನೆ ಮಾಡಲಾಗುತ್ತದೆ. ಎಲ್ಲಾ ವಿಚಾರಗಳ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದರು.

ಹಲವು ಶಾಸಕರು ದೆಹಲಿ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ,  ಯಾರು ಸಹ ದೆಹಲಿಗೆ ಹೋಗುವ ಅಗತ್ಯವಿಲ್ಲ. ವೈಯಕ್ತಿಕ ಕೆಲಸಕ್ಕೆ ಯಾರೋ ಒಬ್ಬರು ಹೋಗಿರಬಹುದು, ನಮ್ಮ ಮೊದಲ ಆದ್ಯತೆ ಕೊರೋನಾ ನಿರ್ವಹಣೆ.  ಬಿಎಸ್ ಯಡಿಯೂರಪ್ಪ  ಸರ್ಕಾರ ಚೆನ್ನಾಹಗಿ ಕೆಲಸ ಮಾಡುತ್ತಿದೆ ಎಂದರು.

ವಿಶ್ವದಲ್ಲೇ ನಾವು ಅತಿದೊಡ್ಡ ಲಸಿಕೆ ಅಭಿಯಾನ ಮಾಡಿದ್ದೇವೆ.  37 ಕೋಟಿಯಷ್ಟು ವ್ಯಾಕ್ಸಿನ್ ನೀಡಿದ್ದೇವೆ ಎಂದು ಹೇಳಿದ  ಪ್ರಹ್ಲಾದ್ ಜೋಶಿ,  ಹರ್ಷವರ್ಧನ್  ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಹೊಸ ಮುಖಗಳಿಗೆ ಅವಕಾಶ ಕೊಡುವ ಕೆಲಸ ಮಾಡಲಾಗಿದೆ. ಹೀಗಾಗಿ ಕೆಲಸಚಿವರನ್ನ ಕೈಬಿಡಲಾಗಿದೆ ಎಂದು  ಪ್ರಹ್ಲಾದ್ ಜೋಶಿ ಸ್ಪಷ್ಟನೆ ನೀಡಿದರು.

Key words:  Monsoon –Session-  All-party -meeting july-18th -Union Minister -Prahlad Joshi.