ಮೋದಿ ವರ್ಸಸ್ ಅರವಿಂದ್ ಕೇಜ್ರಿವಾಲ್: ಗುಜರಾತ್ ನಲ್ಲಿ ಇಂದು ಚುನಾವಣಾ ಪ್ರಚಾರ

ಮೈಸೂರು, ನವೆಂಬರ್ 27, 2022 (www.justkannada.in): ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಗುಜರಾತ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಗುಜರಾತ್ ನ  ವಜ್ರ ನಗರ ಸೂರತ್ ನಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ನರೇಂದ್ರ ಮೋದಿ ಮತ್ತು ಕೇಜ್ರಿವಾಲ್ ಮಾತನಾಡಲಿದ್ದಾರೆ.

ಡಿಸೆಂಬರ್‌.01 ರಂದು ರಾಜ್ಯ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಸೂರತ್‌ನಲ್ಲಿ ಮತದಾನ ನಡೆಯಲಿದೆ.

25 ಕಿಮೀ ರೋಡ್‌ಶೋ ನಂತರ ಪ್ರಧಾನಿ ಮೋದಿ ಸೂರತ್‌ ಮೋಟಾ ವರಾಚಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿಯ ಭದ್ರಕೋಟೆ ಸೂರತ್ ಗೆ ತಮ್ಮ ಎರಡು ದಿನಗಳ ಭೇಟಿಯನ್ನು ಪ್ರಾರಂಭಿಸಲಿದ್ದಾರೆ. ಯೋಗಿ ಚೌಕ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.