ಮೋದಿ ಅಮೆರಿಕಾ ಪ್ರವಾಸ: ನ್ಯೂಯಾರ್ಕ್’ನಲ್ಲಿ ಮೊಳಗಿದ ಭಾರತ್ ಮಾತಾ ಕಿ ಜೈ,ಘೋಷಣೆ

ಬೆಂಗಳೂರು, ಜೂನ್ 21, 2023 (www.justkannada.in): ನಾಲ್ಕು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ನ್ಯೂಯಾರ್ಕ್‌ ನಗರಕ್ಕೆ ಭೇಟಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ವಲಸಿಗರು ಅದ್ದೂರಿ ಸ್ವಾಗತ ನೀಡಿದ್ದಾರೆ. ಮೋದಿ ಕಂಡ ಕೂಡಲೇ ಭಾರತ್ ಮಾತಾ ಕಿ ಜೈ,ಘೋಷಣೆ ಮೊಳಗಿಸಿದ್ದಾರೆ.

ಪ್ರಧಾನಿ ಮೋದಿ ಇಂದು ಯುಎನ್ ಪ್ರಧಾನ ಕಛೇರಿಯಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ವಾಷಿಂಗ್ಟನ್ ಡಿಸಿಗೆ ಪ್ರಯಾಣಿಸಿ ಜೂನ್ 22 ರಂದು ಶ್ವೇತಭವನದಲ್ಲಿ ವಿಧ್ಯುಕ್ತ ಸ್ವಾಗತ ಸ್ವೀಕರಿಸಲಿದ್ದಾರೆ.

ಇದೇ ದಿನ ಸಂಜೆ ಪ್ರಧಾನ ಮಂತ್ರಿಯ ಗೌರವಾರ್ಥ US ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಭೋಜನ ಕೂಟವನ್ನು ಆಯೋಜಿಸುತ್ತಾರೆ. ಅದರಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.