Friday, September 18, 2026

BDA Apartments

Home Front Page ಟ್ರಂಪ್ ಹೇಳಿದ್ದನ್ನು ಪಾಲಿಸುವ ಸಲುವಾಗಿ ಮೋದಿ ಇಸ್ರೇ‍ಲ್ ಗೆ ಭೇಟಿ ನೀಡಿದ್ದರು- ರಾಹುಲ್ ಗಾಂಧಿ

ಟ್ರಂಪ್ ಹೇಳಿದ್ದನ್ನು ಪಾಲಿಸುವ ಸಲುವಾಗಿ ಮೋದಿ ಇಸ್ರೇ‍ಲ್ ಗೆ ಭೇಟಿ ನೀಡಿದ್ದರು- ರಾಹುಲ್ ಗಾಂಧಿ

ಚೆನ್ನೈ,ಏಪ್ರಿಲ್,20,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಯುದ್ದ ಶುರುವಾಗುವ ಮೊದಲು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದನ್ನು ಪಾಲಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಗೆ ಭೇಟಿ ನೀಡಿದ್ದರು ಎಂದು ಕಾಂಗ್ರೆಸ್ ನಾಯಕ ಲೇವಡಿ ಮಾಡಿದರು.

ತಮಿಳುನಾಡಿನಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್  ರಾಹುಲ್ ಗಾಂಧಿ, “ಟ್ರಂಪ್ ಹೇಳಿದಂತೆ ಪ್ರಧಾನಿ ಮೋದಿ  ಕೇಳುತ್ತಾರೆ. ಇರಾನ್‌ ನಲ್ಲಿ ಯುದ್ಧ ಪ್ರಾರಂಭವಾಗುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದನ್ನು ಪಾಲಿಸಲು ಇಸ್ರೇಲ್‌ ಗೆ ಭೇಟಿ ನೀಡಿ ವಾಪಸ್ ಆಗಿದ್ದರು ಎಂದು ಆರೋಪಿಸಿದರು.

ಡೊನಾಲ್ಡ್ ಟ್ರಂಪ್ ಹೇಳುವುದನ್ನೆಲ್ಲಾ ಕೇಳುತ್ತಿರುವ ಮೋದಿ ನಡವಳಿಕೆಗೆ ಇರುವ ಕಾರಣವೆಂದರೆ ಅದು ಎಪ್ಸ್ಟೀನ್ ಫೈಲ್ಸ್ ಮತ್ತು ಅದಾನಿ ಎಂದು ರಾಹುಲ್ ಗಾಂಧಿ ಕುಟುಕಿದರು.

Key words: Modi,  Israel, Trump, Rahul Gandhi