ನಾಯಕತ್ವ ವಿಚಾರವಾಗಿ ನಾನು ಹೇಳಿದ ಮಾತಿಗೆ ಈಗಲೂ ಬದ್ಧ- MLC ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಅಕ್ಟೋಬರ್,25,2025 (www.justkannada.in):  ನಾಯಕತ್ವ ವಿಚಾರವಾಗಿ ನಾನು ಹೇಳಿದ ಮಾತಿಗೆ ಈಗಲೂ ಬದ್ಧ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ನವೆಂಬರ್ ಕ್ರಾಂತಿಯೂ ಇಲ್ಲ, ಡಿಸೆಂಬರ್ ಕ್ರಾಂತಿ ಯಾವ ಕ್ರಾಂತಿಯೂ ಇಲ್ಲ.  5 ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ.  ಈಗಿನ ಪರಿಸ್ಥಿತಿಗೆ ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರುತ್ತಾರೆ ಎಂದು ತಿಳಿಸಿದರು.

ನಾಯಕತ್ವ ವಿಚಾರವಾಗಿ ಹೇಳಿದ ಮಾತಿಗೆ ಈಗಲೂ ಬದ್ದ. ನನ್ನ ಹೇಳಿಕೆಗೆ ನಾನು ಸ್ಪಷ್ಟೀಕರಣ ಕೂಡ ಕೊಟ್ಟಿದ್ದೇನೆ.  ಪಕ್ಷ ನನಗೆ ನೋಟಿಸ್ ಕೊಟ್ಟರೆ ಉತ್ತರ ಕೊಡುತ್ತೇನೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

Key words: leadership, Statement, MLC, Yathindra Siddaramaiah