ಬೆಂಗಳೂರು,ಜುಲೈ,4,2025 (www.justkannada.in): ಸಿಎಸ್ ಶಾಲಿನಿ ರಜನೀಶ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ ಸಿ ರವಿಕುಮಾರ್ ಗೆ ರಿಲೀಫ್ ಸಿಕ್ಕಿದ್ದು ಜುಲೈ 8ರವರೆಗೆ ರವಿಕುಮಾರ್ ಬಂಧನ ಬೇಡ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಪ್ರಕರಣ ಸಂಬಂಧ ಎಫ್ ಐಆರ್ ಪ್ರಶ್ನಿಸಿ ಎಂಎಲ್ ಸಿ ರವಿಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ. ರವಿಕುಮಾರ್ ಪರ ವಾದ ಮಂಡಿಸಿದ ಅರುಣ್ ಶ್ಯಾಮ್, ಸಿಎಂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಈ ಕುರಿತು ರಾಜಕೀಯ ಪ್ರೇರಿತವಾಗಿ ಆರೋಪ ಹೊರಿಸಲಾಗಿದೆ ಎಂದು ವಾದಿಸಿದರು.
ಇನ್ನು ಹೈಕೋರ್ಟ್ ರವಿಕುಮಾರ್ ರನ್ನು ಜುಲೈ 8ರವರೆಗೆ ಬಂಧಿಸುವುದು ಬೇಡ. ಬಲವಂತದ ಕ್ರಮ ಕೈಗೊಳ್ಳುವುದು ಬೇಡ. ತನಿಖೆಗೆ ಸಹಕರಿಸುವಂತೆ ರವಿಕುಮಾರ್ ಗೆ ಹೈಕೋರ್ಟ್ ಸೂಚನೆ ನೀಡಿತು.
Key words: MLC, Ravikumar, High Court, no arrest, till, July 8