ಬೆಂಗಳೂರುಸೆಪ್ಟಂಬರ್,2,2025 (www.justkannada.in): ಮಾಜಿ ಸಚಿವ ಕೆಎನ್ ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿದ್ದಾರೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣಗೆ ಎಂಎಲ್ ಸಿ ರಾಜೇಂದ್ರ ರಾಜಣ್ಣ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಎಂಎಲ್ ಸಿ ರಾಜೇಂದ್ರ ರಾಜಣ್ಣ, ಹೆಚ್ ಸಿ ಬಾಲಕೃಷ್ಣ ಟೀಮ್ ಬಿಜೆಪಿಗೆ ಹೋಗಬಹುದು. ಸಿಎಂ ಮಾಡುತ್ತೇವೆ ಅಂದರೆ ಇವರೆಲ್ಲಾ ಬಿಜೆಪಿಗೆ ಹೋಗಬಹುದು. ಇದೇ ಕೆ.ಎನ್ ರಾಜಣ್ಣ ಅವರು ಹೇಳಿದ ಸೆಪ್ಟಂಬರ್ ಕ್ರಾಂತಿ ಎಂದು ತಿಳಿಸಿದರು.
ಸೆಪ್ಟಂಬರ್ ಆದ ಮೇಲೆ ಕ್ರಾಂತಿ ಇವರೇ ಬಿಜೆಪಿಗೆ ಹೋದ್ರೆ ಅಚ್ಚರಿ ಇಲ್ಲ ಅದೇ ವಿಚಾರವನ್ನ ನಾನು ಪ್ರಸ್ತಾಪ ಮಾಡಿದ್ದು ಅದೇ ಕ್ರಾಂತಿ ಬೇರೆನು ಇಲ್ಲ. ಹೆಚ್ ಸಿ ಬಾಲಕೃಷ್ಣ ಬಿಜೆಪಿ ಜೆಡಿಎಸ್ ಮುಗಿಸಿ ಬಂದಿದ್ದಾರೆ ಕೆಲವರಿಗೆ ಮಾತಾಡೋ ತೀಟೆ ತೆವಲು ಅದನ್ನ ತೀರಿಸಿಕೊಳ್ಳುತ್ತಾರೆ ಎಂದು ಗುಡುಗಿದರು.
Key words: Balakrishna, BJP , September Revolution, MLC, Rajendra Rajanna