ಹೆಚ್.ವಿಶ್ವನಾಥ್ ಬೊಗಳುತ್ತಾರೆ, ಕಚ್ಚುತ್ತಾರೆ, ಹೋದ ಕಡೆ ಎಲ್ಲರ ಬಗ್ಗೆಯೂ ಮಾತನಾಡ್ತಾರೆ- ಸಂಸದ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ.

ಮೈಸೂರು,ಡಿಸೆಂಬರ್,16,2022(www.justkannada.in): ರಾಜಕೀಯ ಅಲೆಮಾರಿ ಎಂದಿದ್ದಕ್ಕೆ ತಮ್ಮ ವಿರುದ್ಧ ಸುದ್ಧಿಗೋಷ್ಠಿ ನಡೆಸಿ ಹರಿಹಾಯ್ದಿದ್ದ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಗೆ ಸಂಸದ ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಬಿಜೆಪಿ ಎಂಎಲ್ ಸಿ  ಹೆಚ್.ವಿಶ್ವನಾಥ್, ಬೊಗಳುತ್ತಾರೆ ಕಚ್ಚುತ್ತಾರೆ. ಹೋದ ಕಡೆ ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಹಿಂದೆ ಕೆ. ಆರ್ ನಗರಕ್ಕೆ ಮಂಚನಹಳ್ಳಿ ಮಹದೇವ್ ಗೆ ಟಿಕೆಟ್ ಬೇಡ ತನಗೆ ಕೊಡಿ ಅಂದಿದ್ದರು. ಚುನಾವಣೆಯಲ್ಲಿ ಸೋತರೆ ಪಾಠ ಮಾಡೋಕೆ ಹೋಗ್ತೇನೆ ಅಂದಿದ್ದರು.  ಪಾಠ ಮಾಡೋಕೆ ಹೋಗಲಿಲ್ಲ ಕೀಟಲೆ ಮಾಡೋಕೆ ಬಂದರು ಎಂದು ಲೇವಡಿ ಮಾಡಿದರು.

ಅಮೇಲೆ ಇದೇ ಹೆಚ್.ವಿಶ್ವನಾಥ್ ಗೆ ಎಂಪಿ ಟಿಕೆಟ್ ಕೊಟ್ಟರು. ನಾವೆಲ್ಲಾ ಸೇರಿಕೊಂಡು ಎಂಪಿ ಚುನವಣೆಯಲ್ಲಿಗೆಲ್ಲಿಸಿದವು. ಎಂಪಿ ಆದ ಮೇಲೆ ಹೆಚ್.ವಿಶ್ವನಾಥ್ ಲೋಕಸಭೆ ಕಲಾಪದಲ್ಲಿ ಒಂದೇ ಒಂದು ಪ್ರಶ್ನೆ ಕೇಳಲಿಲ್ಲ. ಕಲಾಪಕ್ಕೆ ಹೋಗೋದು ಅಲ್ಲಿ ಸಹಿ ಮಾಡೋದು.  ರಾತ್ರಿ ಮನೆಯಲ್ಲಿ ವಿಸ್ಕಿ ಕುಡಿದು ಮಲಗೋದು ಅಷ್ಟೆ ನಿನ್ನ ಕೆಲಸ ಎಂದು ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದರು.

Key words: MLC-H. Vishwanath -talks -MP Srinivas Prasad -mysore