ಮೈಸೂರು,ಅಕ್ಟೋಬರ್,4,2025 (www.justkannada.in): ಬೋಗಾದಿಯ ಎಸ್ ಬಿಎಂ ಬಡಾವಣೆಯ ನಿವಾಸಿಗಳ ಸಮಸ್ಯೆ ನಿವಾರಣೆಗೆ ಆದ್ಯತೆ ಕೊಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಡಾ.ಕೆ ಶಿವಕುಮಾರ್ ತಿಳಿಸಿದರು.
ವಿಧಾನಪರಿಷತ್ ಸದಸ್ಯರಾಗಿ ನಾಮಕರಣಗೊಂಡಿರುವ ಡಾ. ಕೆ .ಶಿವಕುಮಾರ್ ಅವರನ್ನು ಬೋಗಾದಿಯ ಎಸ್ ಬಿ ಎಂ ಬಡಾವಣೆಯ ಹಿರಿಯ ನಾಗರಿಕರು ಅಭಿನಂದಿಸಿದರು.
ಎಸ್ ಬಿಎಂ ಲೇಔಟ್ ನಲ್ಲಿ ಖಾಲಿ ನಿವೇಶನಗಳಲ್ಲಿ ಕಸಗಳನ್ನು ಬೇಕಾಬಿಟ್ಟಿಯಾಗಿ ಲಾರಿಯಲ್ಲಿ ತಂದು ಬಿಸಾಡುತ್ತಿದ್ದಾರೆ. ರಸ್ತೆಗಳು ಗುಂಡಿಮಯವಾಗಿದೆ, ನೀರಿನ ಸಮಸ್ಯೆ ಹೆಚ್ಚಾಗಿದೆ, ವಿದ್ಯುತ್ ಸಮಸ್ಯೆ, ರಸ್ತೆಗಳ ಇಕ್ಕಳುಗಳಲ್ಲಿ , ಗಿಡಗಂಟಿಗಳು ಬೆಳೆದು ನಿಂತಿವೆ. ಬಹುಮುಖ್ಯವಾಗಿ ಬಡವಣೆಯಲ್ಲಿ ಮನೆ ಕಟ್ಟಲು ನಕ್ಷೆಗಳು ಅನುಮೋದನೆ ಆಗುತ್ತಿಲ್ಲ, ಮನೆ ಕಂದಾಯ ಕಟ್ಟಿಸಿಕೊಳ್ಳುತ್ತಿಲ್ಲ, ಇ- ಸ್ವತ್ತು ಮಾಡಿಕೊಡುತ್ತಿಲ್ಲ . ಇದರಿಂದ ತುಂಬಾ ತೊಂದರೆಯನ್ನು ಅನುಭವಿಸಬೇಕಾಗಿದೆ ಎಂದು ಮನವಿ ಮಾಡಿದರು.
ನಂತರ ಕೆ.ಶಿವಕುಮಾರ್ ಮಾತನಾಡಿ, ಶೀಘ್ರದಲ್ಲಿ ತಮ್ಮ ಸಮಸ್ಯೆಗಳ ನಿವಾರಣೆಗೆ ಸಂಬಂಧಪಟ್ಟವರ ಜೊತೆ ಚರ್ಚಿಸಿ ಬಗೆಹರಿಸಲಾಗುವು ಎಂದು ಭರವಸೆ ನೀಡಿದರು. ನಾನು ಕೂಡ ಈ ಬಡಾವಣೆಯ ನಿವಾಸಿಯಾಗಿದ್ದು ಸಮಸ್ಯೆಗಳ ಅರಿವಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ವೈ. ಎಸ್. ನಾಗರಾಜ್, ರಾಘವೇಂದ್ರ ಬಲ್ಲಾಳ, ಎಂ. ನಾಗರಾಜ್, ನಿವಾಸಿಗಳ ಸಂಘದ ಮಾಜಿ ಅಧ್ಯಕ್ಷ ಸ್ವಾಮಿ, ರಾಮಚಂದ್ರು, ಪರಶಿವಮೂರ್ತಿ, ಚಂದ್ರಶೇಖರಪ್ಪ, ರಂಗನಾಥ್, ರಾಮಕೃಷ್ಣ, ಕುಮಾರಸ್ವಾಮಿ, ರಮೇಶ್ ಮುಂತಾದವರು ಉಪಸ್ಥಿತರಿದ್ದರು.
Key words: Mysore, SBM Layout, residents, problems, resolving MLC, Dr. K. Shivakumar