Wednesday, August 12, 2026

BDA Apartments

Home Front Page ಇಡಿ ತನಿಖೆ ಭೀತಿಯಿಂದ ಸೈಟ್ ವಾಪಸ್- ಸಿಎಂ ಸಿದ್ದರಾಮಯ್ಯಗೆ ಸಿ.ಟಿ ರವಿ ಟಾಂಗ್

ಇಡಿ ತನಿಖೆ ಭೀತಿಯಿಂದ ಸೈಟ್ ವಾಪಸ್- ಸಿಎಂ ಸಿದ್ದರಾಮಯ್ಯಗೆ ಸಿ.ಟಿ ರವಿ ಟಾಂಗ್

ಬೆಂಗಳೂರು,ಅಕ್ಟೋಬರ್,1,2024 (www.justkannada.in): ಮುಡಾ ಸೈಟ್ ಹಿಂದಿರುಗಿಸುವುದಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಎಂಎಲ್ ಸಿ ಸಿ.ಟಿ ರವಿ,  ಅಡಿಕೆ ಕದ್ದಾಗ ಹೋದ ಮಾನ ಆನೆ ಕೊಟ್ಟರೂ ಬಾರದು.  ಮುಡಾ ಹಗರಣದಲ್ಲಿ ನಿವೇಶನದಾರರಿಗೆ ಮೋಸ ಮಾಡಲಾಗಿದೆ.   ಕದ್ದ ಮಾಲನ್ನ ಈಗ ವಾಪಸ್ ಕೊಡುತ್ತಿದ್ದಾರೆ. ಇದರಿಂದ ಕಳ್ಳತನ ಆರೋಪ ಸುಳ್ಳಾಗುವುದೇ…? ಎಂದು ಪ್ರಶ್ನಿಸಿದರು.

ಹಿಂದೆಯೇ ಸೈಟ್ ನೀಡಿದ್ರೆ ಅದು ಪ್ರಾಮಾಣಿಕತೆ . ಈಗ ಇಡಿ ತನಿಖೆ ಭೀತಿಯಿಂದ ಸೈಟ್ ವಾಪಸ್ ನೀಡಿದದಾರೆ ಎಂದು ಸಿಟಿ ರವಿ ಟೀಕಿಸಿದ್ದಾರೆ.

Key words: MLC, CT Ravi, CM Siddaramaiah, site, return