ಬೆಂಗಳೂರು,ಅಕ್ಟೋಬರ್,13,2025 (www.justkannada.in): ಆರ್ ಎಸ್ ಎಸ್ ವಿರುದ್ದ ಟೀಕೆ ಟಿಪ್ಪಣಿಗಳನ್ನ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ ರವಿ ಸವಾಲು ಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ಎಂಎಲ್ ಸಿ ಸಿ.ಟಿ ರವಿ, ಆರ್ ಎಸ್ ಎಸ್ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ. ವಿಧಾಣಸಭೆ ವಿಸರ್ಜಿಸಿ ಆರ್ ಎಸ್ಎಸ್ ಬಗ್ಗೆ ಚರ್ಚೆಗೆ ಬನ್ನಿ ಎಂದು ಸವಾಲೆಸೆದಿದ್ದಾರೆ.
ಆರ್ ಎಸ್ ಎಸ್ ಯಾವತ್ತೂ ಭಯೋತ್ಕಾದಕ ಚಟುವಟಿಕೆ ಮಾಡಿಲ್ಲ. ಪ್ರಿಯಾಂಕ್ ಖರ್ಗೆಯವರೇ ನಿಮಗೆ ಎಲ್ಲವೂ ಸುಲಭವಾಗಿ ಸಿಕ್ಕಿದೆ. ನಿಮ್ಮ ತಂದೆಯಿಂದ ನಿಮಗೆ ಅಚಾನಕ್ ಆಗಿ ಎಲ್ಲವೂ ಸಿಕ್ಕಿದೆ. ಅವರೇ ನಿಮಗೆ ಬಸವ ತತ್ವ ಅಂದರೆ ಏನು ಗೊತ್ತಾ..? ನಿಮ್ಮ ಪಕ್ಷಕ್ಕೆ ಬಸವ ತತ್ವ ಅನ್ವಯ ಆಗಲ್ಲ. ಗಾಂಧಿ ಹತ್ಯೆಗೂ ಆರ್ ಎಸ್ಎಸ್ ಗೂ ಸಂಬಂಧವಿಲ್ಲ ಎಂದು ಕಪೂರ್ ಆಯೋಗ ಹೇಳಿದೆ.
ಪ್ರಿಯಾಂಕ್ ಖರ್ಗೆಯವರೇ ಎಲ್ಲವನ್ನೂ ತಿಳಿದು ಮಾತನಾಡಿ ನೀವು ಮಂತ್ರಿಯಾಗಿರುವುದು ಇದೇ ಕೊನೇ ನಿಮ್ಮ ಪಕ್ಷ ಕೂಡ ಅಧಿಕಾರಕ್ಕೆ ಬರುವುದು ಇದೇ ಕೊನೆ. ನೀವು ಸಾಮಾನ್ಯ ಕಾರ್ಯಕರ್ತರ ಅಧಿಕಾರವನ್ನ ಕಬಳಿಸಿದವರು ಆರ್ ಎಸ್ ಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಿಟಿ ರವಿ ಕಿಡಿಕಾರಿದರು.
Key words: discuss, RSS , MLC, CT Ravi, challenges, Congress