ಇವತ್ತೇ ಚುನಾವಣೆ ನಡೆದ್ರೂ ಕಾಂಗ್ರೆಸ್ 50 ಸೀಟೂ ಗೆಲ್ಲಲ್ಲ-  ಚಾಲೆಂಜ್ ಹಾಕಿದ ಸಿ.ಟಿ ರವಿ

ಚಿಕ್ಕಮಗಳೂರು,ಡಿಸೆಂಬರ್,2,2025 (www.justkannada.in):  ರಾಜ್ಯದಲ್ಲಿ ಇವತ್ತೇ ಚುನಾವಣೆ ನಡೆದರೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ,  ಜನರ ವಿಶ್ವಾಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದುಕೊಳ್ಳುತ್ತಿದೆ.  ಸಂಖ್ಯಾ ಬಲ ಮಾತ್ರಕ್ಕೆ ಈ ಸರ್ಕಾರವಿದೆ.  ಇವತ್ತು ಚುನಾವಣೆ ನಡೆದರೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲ್ಲ 50 ಸೀಟ್ ಕೂಡ ಗೆಲ್ಲಲ್ಲ ಅಂತ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ.  ಸಿಎಂ,  ಡಿಸಿಎಂ ಪರೀಕ್ಷೆ ಮಾಡಲಿ. ಚಾಲೆಂಜ್ ಸ್ವೀಕರಿಸಿಲಿ.  ಸರ್ಕಾರ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ.  ಆಗ ಕಾಂಗ್ರೆಸ್ ನವರ ಹಣೆಬರಹ ಗೊತ್ತಾಗುತ್ತೆ ಎಂದು ಸವಾಲು ಹಾಕಿದರು.

ರಸ್ತೆಗಳಲ್ಲಿ ಗುಂಡಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ತಿಂಡಿ ತಿನ್ನುವುದಕ್ಕೆ ಕೊಡುವ ಮಹತ್ವ ಗುಂಡಿ ಮುಚ್ಚಲು ಕೊಟ್ಟಿದ್ದರೇ ಅಮಾಯಕರ ಜೀವ ರಕ್ಷಿಸಬಹುದಿತ್ತು ಎಂದು ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ಬಗ್ಗೆ ವ್ಯಂಗ್ಯವಾಡಿದರು.

Key words: elections Congress, not, win, even, 50 seats, C.T. Ravi