ಚಿಕ್ಕಮಗಳೂರು,ಸೆಪ್ಟಂಬರ್,11,2025 (www.justkannada.in): ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪ್ರಚೋದನಾಕಾರಿ ಭಾಷಣದ ಆರೋಪದ ಮೇಲೆ ತಮ್ಮ ವಿರುದ್ದ ಎಫ್ ಐಆರ್ ದಾಖಲಾದ ಹಿನ್ನೆಲೆಯಲ್ಲಿ ಈ ಕುರಿತು ವಿಧಾನಪರಿಷತ್ ಸದಸ್ಯ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ, ನಮ್ಮ ಸಹನೆಗೂ ಒಂದು ಮಿತಿ ಇದೆ. ನೀವು ನನ್ನ ಮೇಲೆ 100 ಎಫ್ ಐಆರ್ ದಾಖಲಿಸಿದರೂ ನಾನು ಹೆದರಲ್ಲ. ಎಲ್ಲವನ್ನೂ ಎದುರಿಸುತ್ತೇನೆ ಎಂದಿದ್ದಾರೆ.
ಗಣೇಶ ಮೆರವಣಿಗೆ ಮೇಲೆ ಕಲ್ಲು ಹೊಡೆದರೆ ಸುಮ್ಮನಿರಬೇಕಾ? ಪೆಟ್ರೋಲ್ ಬಾಂಬ್ ಹಾಕಿದ್ರೆ ನಾವು ಸುಮ್ಮನಿರಬೇಕಾ? ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಸಹಿಸಿಕೊಳ್ಳುವ ಕಾಲ ಅಲ್ಲ. ತಾಳ್ಮೆ ಕಟ್ಟೆ ಹೊಡೆದಿರುವುದು ತೋರಿಸಲೆಂದೇ ಜನಾಕ್ರೋಶ ವ್ಯಕ್ತವಾಗಿದೆ ಎಂದರು.
ನೀವು ಏನು ಮಾಡಿದರೂ ಸಹಿಸಿಕೊಳ್ಳುತ್ತೇವೆ ಎಂಬ ಕಾಲ ಮುಗಿದಿದೆ. ನೀವು 100 ಹಾಕಿದರೂ ನಾನು ಎದುರಿಸುತ್ತೇನೆ. ನನಗೆ ಯಾವುದೇ ಹೆದರಿಕೆ ಇಲ್ಲ ಎಂದು ಸಿಟಿ ರವಿ ಹೇಳಿದರು.
Key words: Maddur riot case, FIR, against, MLC, C.T Ravi